ರೈತರ ಕೃಷಿ ಉತ್ಪನ್ನಗಳು ಸಹಕಾರ ತತ್ವದಡಿಯಲ್ಲಿ ಮಾರಾಟಗೊಂಡರೆ ಅಭಿವೃದ್ದಿ : ವೈ.ಸಿ. ನಾಗೇಂದ್ರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.19-ರೈತರು ಕೃಷಿ ಉತ್ಪನ್ನಗಳನ್ನು ಸಹಕಾರ ಸಂಘಗಳ ಮೂಲಕ ಮಾರಾಟ ಮಾಡಿ, ಸಹಕಾರಿ ತತ್ವದಡಿಯಲ್ಲಿ ಸಂಘವನ್ನು ಬೆಳೆಸಿದರೆ ಅಭಿವೃದ್ದಿ ಹೊಂದಲು ಸಾಧ್ಯವಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ತಿಳಿಸಿದರು.
ತಾಲೂಕಿನ ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ಸೌಹಾರ್ದ ಸಹಕಾರಿ ಸಂಘದ 6ನೇ ಸರ್ವಸದಸ್ಯರ ವಾರ್ಷಿಕ ವiಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಪ್ರಗತಿಯಿಂದ ಸದಸ್ಯರ ಅಭಿವೃದ್ದಿಯಾಗುತ್ತದೆ. ಮುರುಘರಾಜೇಂದ್ರಸ್ವಾಮಿ ಸೌಹಾರ್ದ ಸಹಕಾರ ಸಂಘವು ಉತ್ತಮವಾಗಿ ವಹಿವಾಟು ಹೊಂದಿ ಸದಸ್ಯರ ಹಿತ ಕಾಯಲು ಬದ್ದವಾಗಿದೆ. ಸೌಹಾರ್ದ ಸಹಕಾರ ಸಂಘಗಳು ಮೂಲಕ ಬಹಳಷ್ಟು ವಹಿವಾಟು ಹೊಂದಲು ಸಾಧ್ಯವಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಮರಿಯಾಲ ಶ್ರೀಮಠದ ಅಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಮಾತನಾಡಿ ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ಸಹಕಾರಿ ಸಂಘವು ಆರ್ಥಿಕತೆಯಲ್ಲಿ ಬೆಳವಣೆಗೆ ಹೊಂದುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಹೊಸ ವಿಧಾನಗಳಾದ ಹನಿ ನೀರಾವರಿ, ಮಿಶ್ರ ಬೇಸಾಯ, ತಂತ್ರಜ್ಷಾನದಿಂದ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡಬೇಕು. ಸಹಕಾರಿ ಸಂಘಗಳಿಂದ ಸಿಗುವ ಸಾಲ ಸೌಲಭ್ಯಗಳನ್ನು ಪಡೆದು ಸಕಾಲದಲ್ಲಿ ಹಿಂತಿರುಗಿಸುವ ಮೂಲಕ ತಾವು ಹಾಗೂ ಸಹಕಾರಿಯ ಬೆಳವಣಿಗೆ ಮುಂದಾಗಬೇಕು ಎಂದರು.
ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ಡಾ. ಹೆಳವರಹುಂಡಿ ಸಿದ್ದಪ್ಪ ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ದೇಶವು ಕೃಷಿ ಆಧಾರಿತ ಆರ್ಥಿಕತೆಗಿಂತ ಜ್ಞಾನದ ಆರ್ಥಿಕತೆಯ ಬೆಳವಣಿಗೆಯು ಕೌಶಲ್ಯಧಾರಿತ ಚಟುವಟಿಕೆಯಿಂದ ಕೂಡಿರುತ್ತದೆ. ಹಾಗೂ ಇಂದಿನ ಪರಿಸ್ಥಿತಿಯಲ್ಲಿ ಸಂಬಳಕ್ಕಾಗಿ ದುಡಿಯುವರ ಸಂಖ್ಯೆ ಹೆಚ್ಚು ಉದ್ಯೋಗ ಕಲ್ಪಿಸುವುದರಲ್ಲಿ ನಾವು ಇನ್ನು ಹಿಂದೆ ಇದ್ದೇವೆ. ಆದ್ದರಿಂದ ನಾವು ಹಾಲು ಕೊಡುವ ಕಾಮಧೇನುವಂತೆ ಬೇರೆಯವರಿಗೆ ಸಹಕಾರ ಮನೋಭಾವನೆ ವ್ಯಕ್ತಿತ್ವ ಮುಖ್ಯ ಎಂದು ತಿಳಿಸಿದರು.
ಶ್ರೀ ಮುರುಘರಾಜೇಂದ್ರಸ್ವಾಮಿ ಭಾವಚಿತ್ರಕ್ಕೆ ಸೌಹಾರ್ದ ಸಹಕಾರಿ ಸಂಘದ ಗೌರವ ಅಧ್ಯಕ್ಷ ಜಿ.ಕುಮಾರಸ್ವಾಮೀಜಿ ಪುಷ್ಪಾರ್ಚನೆ ನೆರವೇರಿಸಿದರು. ಸೌಹಾರ್ದ ಸಹಕಾರ ಸಂಘದ ಸಿಇಓ ಎಸ್. ಸೌಮ್ಯ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಸ್ವಾಮಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷ ಎಂ. ಚಂದ್ರಶೇಖರ್, ಪ್ರಾಂಶುಪಾಲ ದೇವರಾಜು, ಸಂಘದ ಕಾನೂನು ಸಲಹೆಗಾರ ಸಿದ್ದರಾಜು, ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ್, ಸೌಹಾರ್ದ ಅಭಿವೃದ್ದಿ ಅಧಿಕಾರಿ ಬಾಲರಾಮು, ಸೌಹಾರ್ದ ಸಂಘದ ಉಪಾದ್ಯಕ್ಷ ಪ್ರಸನ್ನ, ನಿರ್ದೇಶಕರು ಹಾಗೂ ಸದಸ್ಯರು ಇದ್ದರು.