ಸೇಡಂನಲ್ಲಿ ಮೂರು ಕೃತಿಗಳು ಲೋಕಾರ್ಪಣೆ
ಸೇಡಂ,ಮಾ,18: ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿಂದು ತಾಲೂಕಿನ ಯಡಗಾ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಪ್ರಮೀಳಾ ಪಾಟೀಲ್ ಎಸ್.ಬಿಬ್ಬಳ್ಳಿ.ಅವರು ರಚಿಸಿದ “ಅರಳಿದ ಮೊಗ್ಗು” “ಬೆಳದಿಂಗಳು”ಚಿಣ್ಣರ ಚಿಲಿಪಿಲಿ” ಮೂರು ಕೃತಿಗಳು ಗಣ್ಯರು ಲೋಕಾರ್ಪಣೆ ಮಾಡಿದರು.ಈ ವೇಳೆಯಲ್ಲಿ ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ,ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಡಾ.ಸ್ವಾಮಿರಾವ ಕುಲಕರ್ಣಿ,ಪ್ರಭಾಕರ ಜೋಶಿ,ಶಿವಯ್ಯಸ್ವಾಮಿ ಬಿಬ್ಬಳ್ಳಿ,ಮಲ್ಲಯ್ಯ ಗುತ್ತೇದಾರ್,ಮಹಿಪಾಲರೆಡ್ಡಿ ಮುನ್ನೂರು,ಮಹೇಶ ಹೂಗಾರ,ಸಿದ್ಧಪ್ಪ ತಳ್ಳಳ್ಳಿ,ಅಶೋಕರೆಡ್ಡಿ ಚಿಲುಮೆ, ಚನ್ನಬಸರೆಡ್ಡಿ,ಕಿಷ್ಟಾಪುರ,ಶಿವಶಂಕರಯ್ಯಸ್ವಾಮಿ ಇಮಡಾಪುರ,ಸುರೇಶ ದೇಶಪಾಂಡೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.