ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸೇಡಂ ಸಿದ್ಧ: ಆಶಪ್ಪ ಕೆಎಎಸ್
ಸೇಡಂ,ಮಾ,18: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ
ಈಗಾಗಲೇ ದಿನಾಂಕ ನಿಗದಿಪಡಿಸಲಾಗಿದ್ಧು ತಾಲ್ಲೂಕಿನಾದ್ಯಂತ ನೀತಿಸಂಹಿತೆ ಜಾರಿಗೊಳಿಸಲಾಗಿದೆ ಚುನಾವಣೆಗೆ ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡಲು ಸಕಲ ಸಿದ್ಧತೆಯನ್ನು ಶಾಂತಿಯುತ ಮತದಾನಕ್ಕೆ ಸಿದ್ಧ ಮಾಡಲಾಗಿದೆ ಎಂದು ಸಹಾಯಕ ಮತದಾರರ ಚುನಾವಣಾಧಿಕಾರಿಗಳಾದ ಆಶಪ್ಪ ಕೆಎಎಸ್ ಹೇಳಿದರು. ತಾಲೂಕಾ ಆಡಳಿತ ಸೌಧದ ಚುನಾವಣಾ ಕಾರ್ಯಾಲಯದಲ್ಲಿ ಕರೆಯಲಾಗಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಹಂದರಕಿ, ಆಡಕಿ, ಮೆದಕ್, ರಿಬ್ಬನ್ ಪಲ್ಲಿ, ಹಾಲಕೊಡ, ಕುರುಕುಂಟಾ, ಒಟ್ಟು ಆರು ಚೇಕ್ ಪೆÇೀಸ್ಟ್ ಗಳು ಮಾಡಲಾಗಿದ್ದು ಬಿಗಿ ಭದ್ರತೆ ಒದಗಿಸಲಾಗಿದೆ, ತಾಲೂಕಿನಲ್ಲಿ ಪುರುಷ ಮತದಾರರು 1,12,988 ಇದರೆ ಮಹಿಳೆಯರು1,16,188 ಇತರೆ ಸೇರಿದಂತೆ ಒಟ್ಟು 2,29,204 ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಈ ವೇಳೆಯಲ್ಲಿ ತಹಸಿಲ್ದಾರ್ ಶಿವಾನಂದ್ ಮೇತ್ರೆ ಉಪಸ್ಥಿತರಿದ್ದರು.