ಅವಖಾಳಿ ಮಳೆ ಮತ್ತು ಬಿರುಗಾಳಿ : ಉರುಳಿಬಿದ್ದ ವಿದ್ಯುತ್ ಕಂಬ
ಔರಾದ :ಮಾ.18: ರವಿವಾರ ಮೂರರಿಂದ ನಾಲ್ಕರ ಸುಮಾರಿಗೆ ತಾಲುಕಿನ ಕೆಲವೊಂದು ಕಡೆಗಳಲ್ಲಿ ಭಾರಿ ಪ್ರಮಾಣದ ಬೀರುಗಾಳಿ ಮತ್ತು ಅವಖಾಳಿ ಮಳೆಗೆ ಜನರು ಸಂಕಷ್ಟಪಡುವ ಪ್ರಸಂಗ ಎದುರಾಯಿತು.
ತಾಲೂಕಿನ ಧೂಪತ್ಮಹಗಾಂವ್ ದಲ್ಲಿ ಎರಡು ಗಂಟೆಗಳಿಗೂ ಹೆಚ್ಚಿನ ಕಾಲ ಮಳೆಯಾಗಿದ್ದು, 14ಮಿಮಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಅದೇ ರೀತಿ ಕೌಠಾದಲ್ಲಿ 8 ಮಿಮಿ ಮಳೆಯಾಗಿದೆ. ತಾಲೂಕಿನ ಚಿಕಲಿ(ಜೆ) ಗ್ರಾಮದಲ್ಲಿ ವಿದ್ಯೂತ್ ಕಂಬಕ್ಕೆ ಮರ ಅಪ್ಪಳಿಸಿರುವುದರಿಂದ ವಿದ್ಯೂತ್ ಕಂಬ ಸಂಪೂರ್ಣವಾಗಿ ನೆಲಕ್ಕೆ ಬಿದ್ದು ಮುರಿದು ಬಿಟ್ಟಿದೆ. ಗ್ರಾಮದ ಕೆಲವೊಂದು ಮನೆಗಳಲ್ಲಿ ಪತ್ರಾಸ್ ಹಾರಿಹೋಗಿರುವ ಬಗ್ಗೆ ವರದಿಯಾಗಿದೆ.
ಕಂಬದಲ್ಲಿ ವಿದ್ಯುತ ಇಲ್ಲದ ಕಾರಣ ಯಾವುದೇ ಅವಘಢ ಸಂಭವಿಸಿಲ್ಲ ಎಂದು ಸಂಜೆವಾಣಿಗೆ ವಡಗಾಂವ ವಲಯ ಜೇಸ್ಕಾಂ ಜೆಇ ರಾಜಗೊಂಡಾ ಮಾಹಿತಿ ನೀಡಿದ್ದಾರೆ.