ಬುಧವಾರದಂದು ಅಫಜಲಪುರ ಪಟ್ಟಣ ಅಘೋಷಿತ ಬಂದ್ವ್ಯಾಪಾರಿಗಳು ವರ್ತಕರ ಸಂಘದ ಮುಖ್ಯಸ್ಥರಿಂದ ಸ್ವಯಂಘೋಷಿತ ಬಂದ್ ಗೆ ಬೆಂಬಲ
ಅಫಜಲಪುರ: ಮಾ.18:ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ಅಣೆಕಟ್ಟಿಗೆ 5 ಟಿ.ಎಂ.ಸಿ ನೀರು ಹರಿಸಬೇಕೆಂದು ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ 3 ದಿನಗಳನ್ನು ಪೂರೈಸಿ ಇಂದು ಯಶಸ್ವಿ 4ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆ ಪಟ್ಟಣದ ನಿವಾಸಿಗಳು ದಿನಸಿ ಅಂಗಡಿ ಮಾಲೀಕರು, ಅಡತಿ ಮಾಲೀಕರು ಹೀಗೆ ವಿವಿಧ ವ್ಯಾಪಾರಿ ಸಂಘ ಸಂಸ್ಥೆಯ ವರ್ತಕರ ಮುಖ್ಯಸ್ಥರು ಪಕ್ಷಾತೀತವಾಗಿ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಸಾರ್ವತ್ರಿಕ ಬೆಂಬಲ ಸೂಚಿಸಿದರು.
ನಂತರ ಪ್ರತಿಭಟನೆ ಉದ್ದೇಶಿಸಿ ಸತ್ಯಾಗ್ರಹದ ರೂವಾರಿ ಶಿವಕುಮಾರ ನಾಟೀಕಾರ ಮಾತನಾಡಿ, ಉಜನಿ ವ್ಯಾಪ್ತಿಗೆ ಒಳಪಡುವ ಸೋಲಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡಲೇ ಜಂಟಿ ಸಮೀಕ್ಷೆ ನಡೆಸಿ ನೀರು ಹರಿಸುವ ಕ್ರಮಕ್ಕೆ ಮುಂದಾಗಬೇಕು. ಈಗಾಗಲೇ ಉಜನಿ ಜಲಾಶಯದಲ್ಲಿ ಲೈವ್ ಹಾಗೂ ಡೆಡ್ ಸ್ಟೋರೆಜ್ ನಲ್ಲಿ ಸಾಕಷ್ಟು ನೀರಿನ ಸಂಗ್ರಹ ಪ್ರಮಾಣ ಇದ್ದು ನೀರು ಹರಿಸುವ ಪ್ರಯತ್ನಕ್ಕೆ ಯಾರೂ ಮುಂದಾಗುತ್ತಿಲ್ಲ. ಈಗಾಗಲೇ ಬರಗಾಲದಿಂದ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಮಾರ್ಚ್ ತಿಂಗಳಲ್ಲೇ ಇಷ್ಟೊಂದು ನೀರಿನ ಅಭಾವ ಇರುವಾಗ ಇನ್ನು ಏಪ್ರಿಲ್ ತಿಂಗಳಲ್ಲಿ ಈ ಭಾಗದ ಜನ ಬರಗಾಲದ ಭಾರೀ ತೀವ್ರತೆಯನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಹೋರಾಟದ ತೀವ್ರತೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಗೆ ಮುಖಂಡರಾದ ಮಕ್ಬೂಲ್ ಪಟೇಲ್, ಬಸಣ್ಣ ಗುಣಾರಿ, ಸದಾಶಿವ ಮೇತ್ರಿ, ಚಿದಾನಂದ ಮಠ, ನಾಗರಾಜ ಗುಣಾರಿ,
ಶಿವಪುತ್ರಪ್ಪ ಸಂಗೋಳಗಿ, ಚಂದು ಕರಜಗಿ,
ಮಲ್ಲಿಕಾರ್ಜುನ ಹಿರೇಮಠ, ಶಾಂತು ಅಂಜುಟಗಿ
ದಾನಯ್ಯ ಹಿರೇಮಠ, ಶರಣು ನೂಲಾ, ಬಂಡು ನೂಲಾ, ದತ್ತು ಪೆÇದ್ದಾರ, ಯಶವಂತ್ ಬಡದಾಳ
ಎಸ್.ಎಸ್ ಪಾಟೀಲ್, ಬೀರಣ್ಣಾ ಪೂಜಾರಿ,
ಸೈಫನಸಾಬ್ ಹಿತ್ತಲಶಿರೂರ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ಭೀಮಾ ನದಿ ಬತ್ತಿ ಬರಡು ಆಗಿರುವುದರಿಂದ ಜನ ಜಾನುವರುಗಳು ಹಾಗೂ ರೈತರು ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಹೀಗಾಗಿ
ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬುಧವಾರದಂದು ಅಫಜಲಪುರ ಪಟ್ಟಣ ಅಘೋಷಿತ ಬಂದ್ ಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೋರಾಟದ ಮುಖ್ಯಸ್ಥರಿಂದ ತಿಳಿದು ಬಂದಿದೆ. ಹಾಗೂ ಅಂದಿನ ದಿನ ವ್ಯಾಪಾರಿಗಳು, ವರ್ತಕರ ಸಂಘದ ಮುಖ್ಯಸ್ಥರು ಸ್ವಯಂಘೋಷಿತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಿರತ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.