ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆ: ಎಸ್.ವೈ ಪಾಟೀಲ್
ಅಫಜಲಪುರ:ಮಾ.18: ಗ್ರಾಮೀಣ ಭಾಗದ ಮಕ್ಕಳ ಸವಾರ್ಂಗೀಣ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಕಾರ್ಯ ಸಂತಸ ತಂದಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ವೈ ಪಾಟೀಲ ತಿಳಿಸಿದರು.
ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಜ್ಞಾನ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಉನ್ನತ ಮಟ್ಟದ ಅಧಿಕಾರಿಗಳಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವಂತಾಗಲಿ ಹಾಗೂ ಸಂಸ್ಥೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ಮುಖ್ಯಸ್ಥ ಗುಂಡೇರಾವ ದೇಶಮುಖ ಅವರು ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಪಾಲಕರ ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಗ್ರಾಮೀಣ ಮಟ್ಟದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜ್ಞಾನ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ದಿಟ್ಟ ಹೆಜ್ಜೆ ಹಾಕಿದೆ. ಪ್ರಾರಂಭದಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇದೀಗ ನೂರಾರು ಮಕ್ಕಳು ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲದೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಅವಕಾಶ ಪಡೆದಿದ್ದಾರೆ. ಈ ಶಾಲೆಯಲ್ಲಿ ಗುಣಮಟ್ಟದ ಅನುಭವಿ ಶಿಕ್ಷಕರಿದ್ದಾರೆ, ನಿಸರ್ಗದ ಮಡಿಲಲ್ಲಿ ಸುಂದರವಾದ ಶಾಲಾ ಕಟ್ಟಡವಿದ್ದು ಮಕ್ಕಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಬಗೆಯ ಸಂಸ್ಕøತಿ, ಆಚಾರ, ವಿಚಾರ, ಸಂಗೀತ, ನೃತ್ಯಗಳಿಂದ ನೋಡುಗರ ಕಣ್ಮನ ಸೆಳೆದವು. ಈ ವೇಳೆ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಅತನೂರಿನ ಅಭಿನವ ಗುರುಬಸವ ಶಿವಾಚಾರ್ಯರು, ವೇದಮೂರ್ತಿ ಚರಂತಿಮಠ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೋಮಶೇಖರ ದೇಶಮುಖ ಮತ್ತು ಬಾಬುರಾವ ದೇಶಮುಖ ನೇತೃತ್ವ ವಹಿಸಿದರು.
ಮುಖಂಡರಾದ ಕಲ್ಯಾಣಿ ಸಿಂದಗೇರಿ ಜ್ಯೋತಿ ಬೆಳಗಿಸಿದರು. ಶರಣಬಸಪ್ಪ ಉಪ್ಪಿನ್ ಪೆÇೀಟೊ ಪೂಜೆ ನೆರವೇರಿಸಿದರು. ಕೇದಾರ ಎಸ್ ಚೌಧರಿ ಭೂಮಿ ಪೂಜೆ ನೆರವೇರಿಸಿದರು. ರಾಮು ಪ್ಯಾಟಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಬೂಬ ಪಟೇಲ ಸಸಿಗೆ ನೀರುಣಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಗಂಗಾಶ್ರೀ ದೇಶಮುಖ, ಶಾಲಾ ಮುಖ್ಯಗುರು ಹಣಮಂತ್ರಾಯಗೌಡ ಪಾಟೀಲ, ಶಿಕ್ಷಕ ಸಿಬ್ಬಂದಿಗಳಾದ ಪ್ರಶಾಂತ್ ಯಳಸಂಗಿ, ಆನಂದ ಛತ್ರಬಂದ, ಸತೀಶ್ ಪಾಲಾಪೂರೆ, ಅಶ್ವಿನಿ ಸಿಂಗೆ, ಜ್ಯೋತಿ ವಠಾರ, ವೈಶಾಲಿ ಜಿಡ್ಡಿಮನಿ, ಸುವರ್ಣ ನಾಯ್ಕೋಡಿ, ಪೂಜಾ ತಮ್ಮದೊಡ್ಡಿ, ಲಕ್ಷ್ಮಿ ಕಟಗೇರಿ, ಅಂಬಿಕಾ, ವಾರ್ಡನ್ ಸಂಜಯಕುಮಾರ ಜಮಾದಾರ ಸೇರಿದಂತೆ ಅನೇಕರಿದ್ದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿನಯವನ್ನು ನಾವು ಕಾಣಬಹುದು. ಅದಕ್ಕೆ ಪಾಲಕರು ಒಳ್ಳೆಯ ರೀತಿಯಲ್ಲಿ ಶಿಕ್ಷಣ ಕೊಡಿಸುವುದರ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳ ಕೈಯಲ್ಲಿ ಮೊಬೈಲನ್ನು ನೀಡದೆ ಒಳ್ಳೆಯ ಪುಸ್ತಕ ನೀಡಬೇಕು.