ಪುನೀತ ರಾಜಕುಮಾರ ಜಯಂತಿ
ವಿಜಯಪುರ,ಮಾ.18:ನಗರದ ಮಹಾತ್ಮ ಗಾಂಧಿ ಆಶ್ರಯ ಬಡಾವಣೆಯಲ್ಲಿ ಪುನೀತ ರಾಜಕುಮಾರ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ರಾಜೇಂದ್ರ ಹಜೇರಿ ಅವರು ಮಾತನಾಡಿ. ಪುನೀತ್ ರಾಜಕುಮಾರ ಅವರು ಕನ್ನಡ ಸಾಂಸ್ಕøತಿಕ ಲೋಕಕ್ಕೆ ಚಲನಚಿತ್ರಗಳ ಮೂಲಕ ದೊಡ್ಡ ಕೊಡುಗೆ ನೀಡಿದ ಮೇರು ನಟರಾಗಿದ್ದರು. ಸದ್ದಿಲ್ಲದೇ ಸಮಾಜ ಸೇವೆಯ ಮೂಲಕ ಸಾವಿರಾರು ಜನ ನಿರ್ಗತಿಕರ ಬಾಳಿಗೆ ಬೆಳಕು ನೀಡಿದ ಮಹಾ ಚೇತನವಾಗಿದ್ದಾರೆ. ಅಪ್ಪು ಎಂದು ಜನಮಾನಸದಿಂದ ಕರೆಸಿಕೊಳ್ಳುವ ಪುನೀತ ಅವರ ಸಾಮಾಜಿಕ ಕಳಕಳಿ ನಮಗೆಲ್ಲ ಮಾದರಿಯಾಗಿದೆ ಎಂದರು.
ಆನಂದ ಜಂಬಗಿ, ಅಶೋಕ ತಪಶೆಟ್ಟಿ, ಮಹಿಬೂಬ ಫರ್ತಾಬಾದ್, ಸಂತೋಷ ರಜಪೂತ, ಮಲ್ಲು ಮನಗೂಳಿ, ಭಗತಸಿಂಗ್ ಹಜೇರಿ, ಅರುಣ ತಪಶೆಟ್ಟಿ, ಸಂತೋಷ ರಾಠೋಡ, ಹಣಮಂತ ಸೇರಿದಂತೆ ಸಾವಿರಾರು ಜನ ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.