ಡಾ.ಪುನೀತ್ ರಾಜಕುಮಾರ ಅವರ 49ನೇ ಜನ್ಮದಿನ ದಿನಾಚರಣೆ
ಕೊಲ್ಹಾರ:ಮಾ.18: ಯಾವುದೇ ಪ್ರಚಾರ ಇಲ್ಲದೆ ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸಿದ್ದರು ತಮ್ಮ ದುಡಿಮೆಯ ಪಾಲನ್ನು ಸಮಾಜ ಸೇವೆಗೆ ಮೀಸಲಿಡುವ ಮೂಲಕ ಮರಣದ ನಂತರವೂ ಪುನಿತ್ ರಾಜಕುಮಾರ್ ಜೀವಂತವಾಗಿದ್ದಾರೆ’ ಎಂದು ಜಗದ್ಗುರು ಶ್ರೀ ಕಲ್ಲಿನಾಥ ದೇವರು ಸ್ಮರಿಸಿದರು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಬೆಂಕಿ ಬಾಯ್ಸ್ ಬಳಗದಿಂದ ಕನ್ನಡ ಚಿತ್ರರಂಗದ ಖ್ಯಾತ ನಟ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡು ಕಂಡ, ದೇಶ ಕಂಡ, ವಿಶ್ವ ಕಂಡ ನಟರಲ್ಲಿ ಪುನೀತರಾಜಕುಮಾರ ಮೊದಲಿಗರಾಗಿ ನಿಲ್ಲುತ್ತಾರೆ, ಅವರು ನಟನೆಯನ್ನಷ್ಟೇ ಅಲ್ಲದೆ ಸಾಮಾಜಮುಖಿ ಕಾರ್ಯಗಳ ಮೂಲಕ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಪುನೀತ್ ಹುಟ್ಟಿದ ದಿನವನ್ನು ಸ್ಫೂರ್ತಿಯ ದಿನವೆಂದು ಸರ್ಕಾರ ಘೋಷಣೆ ಮಾಡಿದೆ. ಎಲ್ಲರು ಸಾಧ್ಯವಾದಷ್ಟು ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀ ಹನಮಂತ ಕಲ್ಲಪ್ಪ ಬೆಳ್ಳುಬ್ಬಿ, ಹಾಗೂ , ಹಿರಿಯರು ಮುಖಂಡರು,ರಾಣಿ ಚೆನ್ನಮ್ಮ ಸರ್ಕಲ್ ಗೆಳೆಯರ ಬಳಗ ಹಾಗೂ ಬೆಂಕಿ ಬಾಯ್ಸ್ ಪದಾಧಿಕಾರಿಗಳು ಸಹಿತ ಅನೇಕರು ಉಪಸ್ಥಿತರಿದ್ದರು.