ವಿಜೃಂಬಣೆಯಿಂದ ಜರುಗಿದ ಶ್ರೀ ಶಿವದಾಸಿಮಯ್ಯನವರ ಜಯಂತಿ
ತಾಳಿಕೋಟೆ:ಮಾ.18: ಸ್ಥಳೀಯ ಶಿವಶಿಂಪಿ ಸಮಾಜ ಬಾಂದವರ ವತಿಯಿಂದ ಪ್ರತಿವರ್ಷದಂತೆ ಈ ಸಲ ದಿ.17 ರವಿವಾರರಂದು ಶ್ರೀ ಶಿವದಾಸಿಮಯ್ಯನವರ ಜಯಂತ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಜಯಂತ್ಯೋತ್ಸವ ಅಂಗವಾಗಿ ಶ್ರೀ ದಾಸಿಮಯ್ಯನವರ ಉತ್ಸವ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಅಲಂಕಾರದೊಂದಿಗೆ ಮಹಾ ಮಂಗಳಾರತಿ ಗೈಯಲಾಯಿತಲ್ಲದೇ ನಂತರ ಶ್ರೀ ಶಿವದಾಸಿಮಯ್ಯನವರ ಬೃಹತ್ ಆಕಾರದ ಭಾವಚಿತ್ರದ ಮೇರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಶ್ರೀ ಬಸವಣ್ಣ ದೇವರ ಮಂದಿರದಿಂದ ಪ್ರಾರಂಭಗೊಂಡ ಶ್ರೀ ಸಿವದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆಯು ರಾಜವಾಡೆ, ಭಾವನಮಠದ ವರೆಗೆ ಜರುಗಿ ಗಂಗಸ್ಥಳದೊಂದಿಗೆ ಸುಮಂಗಲೆಯರ ಕುಂಭ ಮೇಳ ಹಾಗೂ ಕಳಸೋತ್ಸವ ಅಲ್ಲದೇ ಫಲ್ಲಕ್ಕಿ ಉತ್ಸವ ವಿವಿಧ ವಾದ್ಯವೈಭವಗಳೊಂದಿಗೆ ಜರುಗಿದ ಈ ಭವ್ಯ ಮೆರವಣಿಗೆಯು ಶಿವಾಜಿ ಮಹಾರಾಜರ ವೃತ್ತ ಮಾರ್ಗವಾಗಿ ಶ್ರೀ ವಿಠ್ಠಲ ಮಂದಿರ ರಸ್ತೆ, ಬಾಲಾಜಿ ಮಂದಿರ ರಸ್ತೆ, ಕತ್ರಿ ಭಜಾರ ಮಾರ್ಗವಾಗಿ ಮರಳಿ ಶ್ರೀ ಬಸವಣ್ಣ ದೇವರ ದೇವಸ್ಥಾನಕ್ಕೆ ತಲುಪಿತು.
ಈ ಮೇರವಣಿಗೆಯಲ್ಲಿ ಕುದರೆ ಕುಣಿತ ವಿವಿಧ ನಮೂನೆಯ ವಾದ್ಯಗಳು ಜನಮನ ಸೇಳದವು. ಹಲಗೆಯ ನಾದನೆಯಂತೆ ಕುದುರೆ ಕುಣಿತವು ನೋಡುಗರ ಮನ ರಂಜಿಸಿತು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗಿತು.
ಈ ಮೇರವಣಿಗೆಯ ನೇತೃತ್ವವನ್ನು ಸಮಾಜದ ಮುಖಂಡರುಗಳಾದ ಎನ್.ಎಸ್.ಬಬಲೇಶ್ವರ, ಸುಭಾಸ ಯಾಳಗಿ, ಶಿವಪ್ಪ ನಿಡಗುಂದಿ, ಪ್ರಕಾಶ ನಿಡಗುಂದಿ, ವಿಶ್ವನಾಥ ಬಡದಾಳಿ, ಶಾಂತಪ್ಪ ಯಳಮೇಲಿ, ಶಿವಾನಂದ ಯಳಮೇಲಿ, ಮಹಾಂತೇಶ ಬಬಲೇಶ್ವರ, ಚಂದ್ರಕಾಂತ ಬಬಲೇಶ್ವರ, ಬಸವರಾಜ ಅರವಳ್ಳಿ, ಸಿದ್ದು ನಿಡಗುಂದಿ, ಬಸವರಾಜ ಯಡ್ರಾಮಿ, ಮಹಾಂತಪ್ಪ ಬೊಮ್ಮನಹಳ್ಳಿ, ಅಶೋಕ ಸುನದಳ್ಳಿ, ಮೊದಲಾದವರು ವಹಿಸಿದ್ದರು.