ಮತ್ತೊಮ್ಮೆ ಸಂಜೀವಿನಿಯಾದ ಡಾ. ರವಿಕುಮಾರ್ ಟಿ.ಜಿ

ಸಂಜೆವಾಣಿ ವಾರ್ತೆ
ದಾವಣಗೆರೆ. ಮಾ.೧೮; ತ್ಯಾವಣಿಗೆ ಸಮೀಪದ ಸೋಮೇಶ್ವರ ಸಂಸ್ಥೆಯ ಬಳಿ ಬಿಸಿಲಿನ ಬೇಗೆಯಿಂದ ಬಳಲಿ ರಸ್ತೆ ಬದಿ ನಿಸ್ತೇಜರಾಗಿದ್ದ ಮಹಿಳೆಗೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ ಅವರು ಸಂಜೀವಿನಿಯಾಗಿದ್ದಾರೆ. ಕಾರ್ಯ ನಿಮಿತ್ತ ಡಾ. ರವಿಕುಮಾರ್ ಅವರು ಚನ್ನಗಿರಿಗೆ ತೆರಳುವಾಗ ರಸ್ತೆ ಬದಿ ಮಹಿಳೆಯೊಬ್ಬರು ಬೈಕ್ ನಿಲ್ಲಿಸಿ ಕುಳಿತಿದ್ದನ್ನು ಗಮನಿಸಿದ ಡಾ. ರವಿಕುಮಾರ್, ಕೂಡಲೇ ವಾಹನ ನಿಲ್ಲಿಸಿ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ವ್ಯಕ್ತಿಗೆ ಚೇತರಿಕೆ ನೀಡಿದ್ದಾರೆ.ಬಿಸಿಲಿನಿಂದಾಗಿ ಪ್ರಜ್ಞೆ ತಪ್ಪಿದ ಕಾರಣ ಅವರನ್ನು ನೆರಳಿನಲ್ಲಿ ಕೂರಿಸಿ, ಕುಡಿಯಲು ನೀರು ನೀಡಿದ್ದಾರೆ. ನಂತರ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ತಲುಪಿಸಿ, ಆರೋಗ್ಯ ದಾಸೋಹ ತತ್ವವನ್ನು ಮತ್ತೊಮ್ಮೆ ಸಾರಿದ್ದಾರೆ. ಡಾ. ರವಿಕುಮಾರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.