ಪುನೀತ್ ಜನ್ಮದಿನಾಚರಣೆ
ಕಾಳಗಿ : ಮಾ.18:ನಗರ ಹಾಗೂ ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ಕೇಕ್ ಕತ್ತರಿಸಿ, ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದರು. ಅಪ್ಪು ಅಭಿಮಾನಿಗಳ ವತಿಯಿಂದ ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕೇಕ್ ವಿತರಿಸಲಾಯಿತು.
ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರವಿಟ್ಟು ಪುಷ್ಪರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀಮಂತ ಬಹುರೂಪಿ,ನಂಜುಂಡ ದಂಡೋತಿಕರ್, ಶೇಖರ್ ದಂಡೋತಿಕರ್, ಆಕಾಶ ಬಹುರೂಪಿ, ಅರ್ಜುನ ಬಹುರೂಪಿ ಸೇರಿದಂತೆ ಅನೇಕರಿದ್ದರು.