ಹೊಸಪೇಟೆಯಲ್ಲಿ ಅಪ್ಪು ಬರ್ತ್‍ಡೇ ಆಚರಣೆ
ಸಂಜೆವಾಣಿ ವಾರ್ತೆ
ವಿಜಯನಗರ:ಸಾ,18- ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 49ನೇ ಜನ್ಮದಿನದ ನಿಮಿತ್ತ ಪುನೀತ್ ಅಭಿಮಾನಿಗಳು, ಅಪ್ಪುದೇವರ ಮಾಲಧಾರಿಗಳಿಂದ ನಗರದ ವಿವಿಧೆಡೆ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ಮಾಡುವ ಮೂಲಕ ಮನಮೆಚ್ಚಿನ ನಟನ ಜನ್ಮದಿನವನ್ನು ಸಂಭ್ರಮದಿಂ ದ ಆವರಿಸಿದರು.
ಇಲ್ಲಿನ ಪುನೀತ್ ರಾಜ್‍ಕುಮಾರ್ ಸರ್ಕಲ್‍ನಲ್ಲಿರುವ ಅಪ್ಪು ಪುತ್ಥಳಿಗೆ ದಿನವಿಡೀ ಪೂಜೆ ಸಲ್ಲಿಸಿದರು. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು  , ಅಪ್ಪು ಅಭಿಮಾನಿ ಬಳಗದ ಪ್ರಮುಖರಾದ ಕಿಚಡಿ ವಿಶ್ವ, ಜೋಗಿ ತಾಯಪ್ಪ ಪುನೀತ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಅದರಂತೆ ಸಂಗೊಳ್ಳಿ ರಾಯಣ್ಣ ಸರ್ಕಲ್, ಜಿಲ್ಲಾ ಕ್ರೀಡಾಂಗಣದ ಬಳಿ, 100 ಬೆಡ್ ಆಸ್ಪತ್ರೆ ಸೇರಿದಂತೆ ನಗರದ ವಿವಿಧೆಡೆ ಅಪ್ಪು ಭಾವಚಿತ್ರವನ್ನಿರಿಸಿ, ಪೂಜೆ ಸಲಿಸಿದರು. ಬಳಿಕ ಅಭಿಮಾನಿಗಳಿಂದ ಸಾರ್ವಜನಿಕರಿಗೆ ವಿತ್ರಾಹ್ನ, ರೈಸ್ ಬಾತ್, ಪಲಾವ್, ಬಾಡೂಟ ವಿತರಿಸುವ ಮೂಲಕ ಅಭಿಮಾನ ಮೆರೆದರು.
One attachment • Scanned by Gmail