ಕರ್ನಾಟಕ ಲೇಖಕಿಯರ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ
ಬೀದರ: ಮಾ.18:ನಗರದ ಅರುಣೋದಯ ಪ್ರಾ.ಹಾಗೂ ಪ್ರೌಢ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಕರ್ನಾಟಕ ಲೇಖಕಿಯರ ಸಂಘ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಪ್ರ ಪ್ರಥಮ ಬಾರಿಗೆ, ಆಶು ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಮಹಿಳೆಯರ ಕುರಿತು ಮಹಿಳಾ ಸ್ಥಿತಿ ಗತಿ ಕುರಿತಂತೆ 25ಶೀರ್ಷಿಕೆ ಅಡಿಯಲ್ಲಿ ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರಥಮ ಬಾರಿಗೆ ಈ ಕವಿ ಗೋಷ್ಠಿಗೆ ಹೆಚ್ಚಿನ ಮೆರುಗನ್ನು ತಂದು ಕೊಟ್ಟರು.
ಸುಮಾರು 25ಜನ ಕವಿಗಳು ಕಾವ್ಯ ವಾಚನ ಮಾಡಿದರು.ಇಪ್ಪತ್ತೈದು ಶೀರ್ಷಿಕೆಯಡಿಯಲ್ಲಿ.ಮಹಿಳೆಯರ ಸ್ಥಿತಿ ಗತಿ ಕುರಿತಂತೆ,ಅಂದಿನಿಂದ ಇಂದಿನವರೆಗಿನ ಮಹಿಳೆಯರ ಆಗು ಹೋಗುಗಳ ಬಗ್ಗೆ ವಿಷಯ ಕೊಡಲಾಗಿತ್ತು.
ಎಲ್ಲಾ ಶೀರ್ಷಿಕೆಗಳು ಅನುಗುಣವಾಗಿ ಚಿಕ್ಕ ಚೊಕ್ಕ ಕವನಗಳನ್ನು ಹಾಸ್ಯ ವಿಡಂಬನೆ ಕಳವಳ ಅಸಾಹಯಕತೆಗಳನ್ನೊಳಗೊಂಡ ಕವನಗಳು ಚಪ್ಪಾಳೆ ಗಿಟ್ಟಿಸಿ ಕೊಂಡವು.
ವಿಷೇಶವಾಗಿ ಶ್ರೀಮತಿ ರೇಖಾ ಸೌದಿಯವರು ಸ್ತ್ರೀ ಅಂದರೆ ಅಷ್ಟೆ ಸಾಕೆ ಎಂಬ ಜಿ.ಎಸ್.ರವರ, ಹಾಡನ್ನು ಸುಶ್ರಾವ್ಯವಾಗಿ ಹಾಡಿ ಮೊಟ್ಟ ಮೊದಲ ಬಾರಿಗೆ ಅರೇಂಜ್ಡ್ ಮ್ಯಾರೇಜ್ ಮತ್ತು ಲವ್ ಮ್ಯಾರೇಜ್ ಬಗ್ಗೆ ತಮ್ಮದೆ ವೈಯಕ್ತಿಕ ಜೀವನದ ದಾಂಪತ್ಯದ ಬಗ್ಗೆ ಕವನ ವಾಚನ ಮಾಡಿದ್ದು ವಿಷೇಶವಾಗಿತ್ತು.
ಪ್ರತಿತಿಂಗಳು ಒಬ್ಬರ ಮನೆಯಲ್ಲಿ ಸಾಹಿತ್ಯ ಸೌರಭ ಕಾರ್ಯಕ್ರಮ ಇಟ್ಟುಕೊಂಡು ಕನ್ನಡದ ಕಂಪು ಹರಿಸಲು ಲೇಖಕಿಯರ ಸಮ್ಮತಿಯೂ ದೊರೆಯಿತು ಒಟ್ಟಿನಲ್ಲಿ ಸರಳ ಸಡಗರದಿಂದ ಕಾರ್ಯಕ್ರಮ ಕಳೆಗಟ್ಟಿತು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ಪುಣ್ಯವತಿ ವಹಿಸಿದ್ದರೆ,ಉದ್ಘಾಟನೆಯನ್ನು ಶ್ರೀಮತಿ ಮಲ್ಲಮ್ಮಾ ಪಾಟೀಲ.ಪ್ರಾಸ್ತಾವಿಕ ನುಡಿಯನ್ನು ಭಾರತಿ ವಸ್ತ್ರದ ನುಡಿದರೆ,ಮಂಗಲಾ ಭಾಗವತರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.