ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು, ಅದನ್ನು ತಪ್ಪದೆ ಚಲಾಯಿಸಬೇಕು: ವೀರಭದ್ರಪ್ಪ ಉಪ್ಪಿನ
ಬೀದರ:ಮಾ.18:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡ ಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ರವರು ಕರೆ ನೀಡಿದರು. ಮತದಾನವು ಪ್ರತಿಯೊಬ್ಬರಿಗೆ ಸಂವಿಧಾನವು ನೀಡಿದ ಹಕ್ಕು ಆಗಿದೆ. ಬೀದರ ನ ಜೈ ಹಿಂದ್ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯ ಕ್ರಮದಲ್ಲಿ ಅವರು ಮಾತ ನಾಡುತ್ತಿದ್ದರು.ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವವನ್ನು ಗಟ್ಟಿ ಗೊಳಿಸಬೇಕೆಂದು ಅವರು ಜನತೆಗೆ ಮನವಿ ಮಾಡಿದರು. ಕರ್ನಾಟಕ ವಚನ ಸಾಹಿತ್ಯ ಪರಿಷತ್ ಬೆಂಗಳೂರು ಇವರಿಂದ ಇತ್ತೀಚೆಗೆ ಬಳ್ಳಾರಿ ಯಲ್ಲಿ ನಡೆದ ನಾಲ್ಕನೇ ರಾಜ್ಯ ಸಮ್ಮೇಳನದಲ್ಲಿ ಬೀದರಿನ ಹಿರಿಯ ಸಾಹಿತಿ ಡಾ ಎಂ ಜಿ ದೇಶಪಾಂಡೆ ಅವರಿಗೆ ರಾಜ್ಯ ಮಟ್ಟದ ಅವ್ವ ಪ್ರಶಸ್ತಿಯು ನೀಡಲಾದ ನಿಮಿತ್ಯ, ದೇಶ ಪಾಂಡೆಯವರನ್ನು ಸನ್ಮಾನಿ ಸಲಾಯಿತು. 3000 ಕಿಲೋ ಮೀಟರಗಳಷ್ಟು ಕಾರಿನಲ್ಲಿ ಪ್ರಯಾಣ ಮಾಡಿ, ಅಯೋಧ್ಯೆ ಯ ದರ್ಶನ ಪಡೆದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ್ ಹಾಗೂ ಇತರರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸ ಲಾಯಿತು. ಸಂಘದ ಉಪಾ ಧ್ಯಕ್ಷರಾದ ವಿಜಯ ಕುಮಾರ ಸೂರ್ಯಾನರವರು ಸ್ವಾಗತಿ ಸಿದರು. ಕೋಷಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ಕೊನೆಯಲ್ಲಿ ವಂದಿಸಿದರು. ಸಾಮೂಹಿಕ ರಾಷ್ಟ್ರಗಾನದ ನಂತರ ಕಾರ್ಯಕ್ರಮವು ಮುಕ್ತಾಯಗೊಂಡಿತ್ತು.
ಶಿವಪುತ್ರ ಮೆಟಗೆ, ಮಚ್ಚೆಂದ್ರ ಏಕಲಾರ್ಕರ್, ಶಂಕರ್, ಮಲ್ಲಿಕಾರ್ಜುನ್ ಪಾಟೀಲ್, ವಿಜಯಕುಮಾರ ಅತನೂರ್, ಕೆವಿ ಪಾಟೀಲ್, ಬಸವರಾಜ ಘುಲೆ, ಗುಂಡೆರಾವ ದೇಶ ಮುಖ, ಸುಧಾಕರ ಗಾದಗಿ, ವೈಭವ, ಸಿಮ್ರಾನ ರಾಮಚಂದ್ರ ಗಾಜ್ರೆ, ಮಹಾಲಿಂಗಪ್ಪ ಬೆಲದಾಳೆ ಮುಂತಾದವರು ಭಾಗವಹಿಸಿದ್ದರು.