ಗಟ್ಟಿ ಧ್ವನಿಯ ಬರಹಗಾರ ರವಿ ಬೆಳಗೆರೆ
ಚಿತ್ತಾಪುರ:ಮಾ.18: ಪತ್ರಿಕಾ ರಂಗದಲ್ಲಿ ಪ್ರಮುಖರಲ್ಲಿ ಒಬ್ಬರಾದ ಪತ್ರಕರ್ತ ರವಿ ಬೆಳಗೆರೆ ದಕ್ಷ, ಪ್ರಾಮಾಣಿಕ ಮತ್ತು ನೇರ ದಿಟ್ಟ ಹಾಗೂ ಗಟ್ಟಿ ಧ್ವನಿಯ ಬರಹಗಾರರಾಗಿದ್ದರು ಎಂದು ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ತಿನ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ರವಿ ಬೆಳಗೆರೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ನಡೆದ ರವಿ ಬೆಳಗೆರೆ ಜನ್ಮದಿನಾಚರಣೆ, ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರವಿ ಬೆಳಗೆರೆ ಅವರು ಬರವಣಿಗೆಯ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಂಡಿದ್ದರು ಅವರು ಬರೆದ ಪುಸ್ತಕಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು.
ರವಿ ಬೆಳಗೆರಿ ಅಭಿಮಾನಿ ಬಳಗದ ಅಧ್ಯಕ್ಷ ರವಿ ಇವಣಿ ಮಾತನಾಡಿ, ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾದ ರವಿ ಬೆಳಗೆರೆ ಅವರ ಬರಹದ ಶಕ್ತಿ ಯಾವ ರೀತಿಯಲ್ಲಿ ಇತ್ತು ಅಂದರೇ ಅವರು ಬರೆಯುವ ಸುದ್ದಿಗಳು, ಸಂಪಾದಕೀಯ ರಾಜ್ಯದ ಜನತೆ ಕೂತುಹಲದಿಂದ ಕಾಯುತ್ತಿದ್ದರು. ಅವರ ಹಾಯ್ ಬೆಂಗಳೂರು ಪತ್ರಿಕೆ ಎಲ್ಲರ ಮನೆಮಾತಾಗಿತ್ತು. ಆದರೆ ಇಂದು ಅವರು ನಮ್ಮ ಮಧ್ಯದಲ್ಲಿ ಇಲ್ಲದಿರುವುದು ನೋವಿನ ಸಂಗತಿ ಆದರೂ ಅವರ ಸಾಹಿತ್ಯದಿಂದ ಅವರು ಜೀವಂತರಾಗಿದ್ದಾರೆ ಯುವ ಪತ್ರಕರ್ತರಿಗೆ ಅವರು ಆದರ್ಶರಾಗಿದ್ದರು ಎಂದು ಬಣ್ಣಿಸಿದರು.
ಪತ್ರಕರ್ತ ಜಗದೇವ ಕುಂಬಾರ, ಕಲಾವಿದ ಬಾಬು ಕಾಶಿ, ರವಿ ಗೊಬ್ಬುರ, ಭಗವಂತ ಜೀವಣಿಗಿ, ಪ್ರಭು ಅರಿಕೇರಿ, ವಿಶ್ವನಾಥ ರಾಠೋಡ, ಮಲ್ಲಣ್ಣಗೌಡ, ಸೀತಾರಾಮ ಕಾಶಿ, ಕುಮಾರ ಡ್ಯಾನ್ಸರ್ ಜಾಧವ ಇತರರು ಇದ್ದರು.