ಕೈಗಾರಿಕಾ ಉದ್ದಿಮೆಗಳಿಗೆ ಅರಿವು ಮೂಡಿಸುವ ಕಾರ್ಯಗಾರ
ಬೀದರ:ಮಾ.18: ನಗರದ ಶಾರದಾ ತರಬೇತಿ ಸಂಸ್ಥೆ ಬೀದರ ಸಭಾಂಗಣದಲ್ಲಿ ಬೀದರ ಜಿಲ್ಲಾ ಕೈಗಾರಿಕಾ ಕೇಂದ್ರ ಬೀದರ, ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೀದರ ಜಿಲ್ಲಾ ರಸಾಯನಿಕ ಮತ್ತು ಔಷಧಗಳ ಕೈಗಾರಿಕಾ ಸಂಘ ಬೀದರಗಳ ಸಂಯುಕ್ತಾಸ್ರಯದಲ್ಲಿ ಒಂದು ದಿವಸದ ಉದ್ದಿಮೆದಾರರಿಗೆ ತರಬೇತಿ ಕಾರ್ಯಗಾರ ಎರ್ಪಡಿಸಲಾಗಿತ್ತು.
ಕಾರ್ಯಗಾರವನ್ನು ಉದ್ಘಾಟಿಸಿ ಶ್ರೀ ದೋಣೆ ಕಿರಣಕುಮಾರ ಸಹಾಯಕ ನಿರ್ದೇಶಕರು ಒSಒಇ-ಡಿಏಫ್‍ಓ ಹುಬ್ಬಳಿ ಮಾತನಾಡಿದರು, ಭಾರತ ಸರ್ಕಾರದ ಒSಒಇ ಮಂತ್ರಾಲಯದ ಅಡಿಯಲ್ಲಿ ಬೀದರ ಕೈಗಾರಿಕೋದ್ಯಮದಾರರಿಗೆ ಮತ್ತು ಜಿಲ್ಲೆಯ ಯುವಕರಿಗಾಗಿ ಕೈಗಾರಿಕೋತ್ಪನ್ನಗಳಲ್ಲಿ ಆಸಕ್ತಿ ಮತ್ತು ಪ್ರೋತ್ಸಾಹ ನೀಡಿ ಧೈರ್ಯದಿಂದ ಬೀದರಿನ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿವರವಾದ ಮಾಹಿತಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹಿರಿಯ ವ್ಯಾಪಾರಿ ಅಭಿವೃದ್ಧಿ ಕಾರ್ಯನಿರ್ವಾಹಕರು ಮತ್ತು Zಇಆ ಅo-oಡಿಜiಟಿಚಿಣoಡಿ ಜ್ಯೋತಿ ಕೃಷ್ಣ ರವರು ಹಮ್ಮಿಕೊಂಡಿರುವ ಕೈಗಾರಿಕಾ ಅರಿವು ಕಾರ್ಯಕ್ರಮವನ್ನು ಸಂಬೋದಿಸಿ ನೊಂದಣಿ, ಗುಣಮಟ್ಟ, ಉತ್ಪನ್ನಗಳ ವೆಚ್ಚ, ಮಾರುಕಟ್ಟೆ ವಿವರ, ಬ್ಯಾಂಕಗಳಿಂದ ಸಾಲ, ತೆರಿಗೆಗಳ ಮತ್ತು ಸಬ್ಸಿಡಿಗಳ ಮುಂತಾದ ವಿಷಯಗಳ ಕುರಿತು ಪವರ್‍ಪಾಯಿಂಟ್ ಮುಖಾಂತರವಾಗಿ ತಮ್ಮ ವಿಷಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ಬಿ.ಜಿ. ಶೆಟಕಾರ ಮಾತನಾಡಿ ಬೀದರ ಯುವಕರು ಕೈಗಾರಿಕೆಗಳನ್ನು ಸ್ಥಾಪಿಸಿ ಸ್ವಾಲಂಬಿಗಳಾಗಬೇಕು ಮತ್ತು ಧೈರ್ಯದಿಂದ ಕೈಗಾರಿಕೆಗಳನ್ನು ಮುನ್ನಡೆಸಬೇಕೆಂದು ಪ್ರೋತ್ಸಾಹಿಸಿದರು. ಅಲ್ಲದೇ ಸ್ಥಳಿಯರು ಸಣ್ಣಪುಟ್ಟ ನೌಕರರಿಗೆ ಆಸೆ ಪಡದೆ ಕ್ರೀಯಾಶೀಲ ಉದ್ದಿಮೆದಾರರಾಗಿ ಇನ್ನೋಬ್ಬರಿಗೆ ಉದ್ಯೋಗ ಕೊಡುವಂತಹ ಘಟಕಗಳನ್ನು ಸ್ಥಾಪಿಸಲು ಮುಂದೆ ಬರಬೇಕೆಂದು ಕರೆ ನಿಡಿದರು.
ನಬಾರ್ಡ ಬೀದರಿನ ಶ್ರೀ ರಾಮರಾವ ಎಜಿಎಂ, ಬೀದರ ರಸಾಯನಿಕ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜೆ.ಕೆ. ದೇವೆಂದ್ರಪ್ಪ, ಶಾರದಾ ತರಬೇತಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಸುಬ್ರಮಣ್ಯಂ ಪ್ರಭು, ಹೈದ್ರಾಬಾದನ ಶ್ರೀ ಟಿ.ವಿ. ಕೃಷ್ಣರಾವ ಹಾಜರಿದ್ದರು.
ಈ ತರಬೇತಿ ಕಾರ್ಯಗಾರರಲ್ಲಿ 40 ಶಿಬಿರಾರ್ಥಿಗಳು ನೊಂದಣಿ ಮಾಡಿಕೊಂಡು ಭಾಗವಹಿಸಿದರು. ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವೀರಕುಮಾರ ಮಜಗೆ, ಆಡಳಿತ ಅಧಿಕಾರಿ ಪ್ರೋ. ಬಸವರಾಜ ಸ್ವಾಮಿ ಹೆಡಗಾಪೂರಕರ, ಸಿಬ್ಬಂದಿಗಳಾದ ಶ್ರೀ ವೈಜಿನಾಥ ಪಾಟೀಲ, ಶ್ರೀ ಬಸವÀರಾಜ ಬೇಲೂರೆ ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ವಿರೇಂದ್ರ ಶಾಸ್ತ್ರಿ ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಕೋರಿ ಮಾತನಾಡಿ ನವಯುವ ಕ್ರೀಯಾಶೀಲ ಉದ್ದಿಮೆದಾರರು ವಿಬಿನ್ನ ತರಹದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದರೆ ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸರ್ವರೀತಿಯ ಮಾರ್ಗದರ್ಶನ ಮತ್ತು ಸಹಾಯ ಮಾಡಲು ಸಿದ್ದರಾಗಿದ್ದು ಸ್ಥಳೀಯ ಯುವಕರು ಮುಂದೆ ಬರಬೇಕೆಂದು ತಿಳಿಸಿದರು. ಜಿಲ್ಲಾ ಕೈಗಾರಿಕೆ ಕೇಂದ್ರ ಬೀದರಿನ ಶ್ರೀ ದೇವಿದಾಸ ಸಹಾಯಕ ನಿದೇಶಕರು ವಂದನಾರ್ಪಣೆ ಮಾಡಿದರು.