ಯಡ್ರಾಮಿ ಪಟ್ಟಣದಲ್ಲಿ ನೀರಿಗಾಗಿ ಜನ ಜಾನುವಾರು ಪರದಾಟ
ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿ:ಮಾ.18:ಪಟ್ಟಣದಲ್ಲಿ ಬೇಸಿಗೆ ಮುನ್ನವೇ ನೀರಿನ ಸಮಸ್ಯೆಯಿಂದ 11 ವಾರ್ಡಿನಲ್ಲಿ ಜನ ಜಾನುವಾರುಗಳು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಪಟ್ಚಣ ಪಂಚಾಯತಿ ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ವಾರ್ಡಿನ ಜನರು ಸುಮಾರು 15 ದಿನಗಳಿಂದ ನೀರು ಬರದೇ ಇದ್ದರು ಕೂಡ ಸರ್ಕಾರಕ್ಕೆ ಪತ್ರ ಬರೆದು ರಾಮ ತೀರ್ಥಕ್ಕೆ ನೀರು ಹರಸಿ ಕೈ ತೊಳೆದುಕೊಂಡಿದೆ.
ಪಟ್ಟಣದ ವಾರ್ಡಗಳಲ್ಲಿ ನೀರಿನ ಮೂಲಗಳಾದ ಕೊಳವೆ ಬಾವಿ ಹಾಗೂ ಹಳ್ಳ ಬಾವಿಗಳಲ್ಲಿ ನೀರು ಇಲ್ಲದೆ ಇರುವದರಿಂದ ಸಮಸ್ಯೆ ಉಂಟಾಗಿದ್ದು.
ತಕ್ಷಣ ಪಟ್ಟಣ ಪಂಚಾಯತಿಯಿಂದ ತಾಲೂಕಿನ ನೀರು ಇರುವಂತ ಕೊಳವೆ ಬಾವಿಗಳು ಮತ್ತು ಬಾವಿಗಳನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡು ಪಟ್ಟಣದ ಜನರಿಗೆ ನೀರು ಒದಗಿಸುವ ಕೆಲಸಾ ಮಾಡಬೇಕು ಎಂದು ಪಟ್ಟಣದ ಜನರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇದ್ದು ಹೊಸದಾಗಿ ಬಂದಿರುವ ಕಾರಣ ತಹಸೀಲ್ದಾರ ಅವರ ಜೋತೆಗೆ ನೀರಿನ ಮೂಲಗಳ ಬಗ್ಗೆ ಚರ್ಚೆ ಮಾಡಿ ಕ್ರಮಕೈಗೊಳ್ಳಲಾಗುವುದು.
—ಮಹಾಂತೇಶ ಕೌಲಾಪೂರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಯಡ್ರಾಮಿ.
ಪಟ್ಟಣದ 11 ವಾರ್ಡಗಳಲ್ಲಿ ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಉಂಟಾಗಿದ್ದು.ತಕ್ಷಣ ನೀರಿನ ವ್ಯವಸ್ಧೆ ಮಾಡಬೇಕು ಹೀಗೆ ಮುಂದುವರಿದರೆ ಉಗ್ರವಾದ ಹೋರಾಟ ಮಾಡಲಾಗುವುದು.
—ರಾಜು.ಎಮ್.ಗಂಗಾಕರ್ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು ಯಡ್ರಾಮಿ.