ದುರ್ಗಮ್ಮನ ಹುಂಡಿಯಲ್ಲಿ 36 ಲಕ್ಷದ 25 ಸಾವಿರದ 417 ರೂ.
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ದೇವಸ್ಥಾನದ 6 ಹುಂಡಿಗಳಲ್ಲಿ  ಕಳೆದ ಎರೆಡು ವರೆ ತಿಂಗಳಲ್ಲಿ
36 ಲಕ್ಷದ 25 ಸಾವಿರದ 417 ರೂ. ಸಂಗ್ರಹವಾಗಿದೆ.
ಮೊನ್ನೆ ದೇವಸ್ಥಾನದ ಸಭಾಂಗಣದಲ್ಲಿ ಹುಂಡಿಗಳಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಹಣ ಎಣಿಕೆ ನಡೆಯಿತು.
ನಾಳೆ ನಡೆಯುವ ಸಿಡಿಬಂಡಿ ರಥೋತ್ಸವದ ಹಿನ್ಬಲೆಯಲ್ಲಿ ಹುಂಡಿಗಲಕ ಎಣಿಕೆ ಕಾರ್ಯ ನಡೆಯಿತೆಂದು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.