ಬಳ್ಳಾರಿಯ ಬಿಜೆಪಿಯ ಪ್ರಥಮನಗರಸಭೆ ಸದಸ್ಯೆ ವೀರಾ ಬಾಲ ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18: ಭಾರತೀಯ ಜನತಾ ಪಕ್ಷದಿಂದ   ಇಲ್ಲಿನ ನಗರಸಭೆಗೆ ಮೊದಲ ಬಾರಿಗೆ 1984 ರಲ್ಲಿ ಆಯ್ಕೆಯಾಗಿದ್ದ ವೀರಾ ಬಾಲ.ಎಮ್. ಷ (79)ನಿನ್ನೆ ನಿಧನರಾಗಿದ್ದಾರೆ.
ನಗರದ ಕೋಟೆ ಪ್ರದೇಶದ ನಿವಾಸಿಗಳಾಗಿದ್ದ ಇವರು  3 ಬಾರಿ ಅಂದರೆ 1984ರಿಂದ 1996ರ ವರೆಗೆ ನಗರಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಮೃತರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ನಗರದಲ್ಲಿ ಜರುಗಿತು.