ಕಣ್ಣಿನ ಒತ್ತಡ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೮; ಕಣ್ಣಿನ ಒತ್ತಡವನ್ನು ಕಾಲ ಕಾಲಕ್ಕೆ ನಿಯಮಿತವಾಗಿ ತಪಾಸಣೆ ಮಾಡಿಸಬೇಕು ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.ನಗರದ ಜಿಲ್ಲಾಆಸ್ಪತ್ರೆಯ ಕಣ್ಣಿನ ಹೊರರೋಗಿ ವಿಭಾಗದಲ್ಲಿ ಶನಿವಾರ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ ವಿಶ್ವ ಗ್ಲೂಕೋಮ ಸಪ್ತಾಹ ಕಾರ್ಯಕ್ರಮ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಣ್ಣಿನ ಆರೈಕೆ ಅರಿವು ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಣ್ಣಿನ ಒತ್ತಡ 40 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೆ ಒಮ್ಮೆಯಾದರೂ ನೇತ್ರ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.  ಜಿಲ್ಲಾ ಆಸ್ಪತ್ರೆಯ ನೇತ್ರ ತಜ್ಞ. ಡಾ.ಮಂಜುನಾಥ ಮಾತನಾಡಿ, ಗ್ಲೂಕೋಮ ಎನ್ನುವುದು ಆಪ್ಟಿಕ್ ನರಕ್ಕೆ ಹಾನಿಯಾಗುವ ಪರಿಸ್ಥಿತಿಗಳ ಒಂದು ಗುಂಪಾಗಿದೆ. ಆಪ್ಟಿಕ್ ನರವು ಕಣ್ಣಿನ ಹಿಂಭಾಗದಲ್ಲಿದೆ ಮತ್ತು ಇದು ದೃಷ್ಟಿಗೋಚರ ಸಂಕೇತಗಳನ್ನು ಕಣ್ಣಿನಿಂದ ಮೆದುಳಿಗೆ ರವಾನಿಸುತ್ತದೆ ಮತ್ತು ದೃಶ್ಯೀಕರಣಕ್ಕೆ ಸಹಾಯ ಮಾಡುತ್ತದೆ. ಆಪ್ಟಿಕ್ ನರಕ್ಕೆ ಹಾನಿಯು ಕುರುಡುತನಕ್ಕೆ ಕಾರಣವಾಗಬಹುದು. ಗ್ಲುಕೋಮಾದಲ್ಲಿ, ಆಪ್ಟಿಕ್ ನರವು ಅದರ ಮೇಲೆ ಬೀರುವ ಅಸಾಮಾನ್ಯವಾಗಿ ಹೆಚ್ಚಿನ ಒತ್ತಡದಿಂದ ಹಾನಿಗೊಳಗಾಗುತ್ತದೆ. ಆಪ್ಟಿಕ್ ನರಕ್ಕೆ ಈ ಹಾನಿಯು ಅಂತಿಮವಾಗಿ ಕುರುಡುತನಕ್ಕೆ ಕಾರಣವಾಗಬಹುದು ಎಂದರು.ಜಿಲ್ಲಾ ಕಾರ್ಯಕ್ರಮ ಅನುμÁ್ಠನಾಧಿಕಾರಿ ಡಾ.ನಾಗರಾಜ್ ಮಾತನಾಡಿ, ನಾವು ಗ್ಲುಕೋಮಾವನ್ನು ಮೊದಲೇ ಪತ್ತೆಹಚ್ಚುವುದನ್ನು ಖಚಿತಪಡಿಸಿಕೊಳ್ಳಲು ಕೆಲವು ಉತ್ತಮ ಮಾರ್ಗಗಳನ್ನು ಅನುಸರಿಸಿ ಆಗಾಗ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗ್ಲುಕೋಮ ಒಂದು ಸಾರ್ವಜನಿಕ ಸಮಸ್ಯೆ. ಕಣ್ಣಿನ ತಪಾಸಣೆ ಇದಕ್ಕ ಸರಿಯಾದ ದಾರಿ, ಸರ್ಕಾರದಿಂದ ಆಶಾ ಕಿರಣ ಕಾರ್ಯಕ್ರಮ ನಡೆಯುತ್ತಿದ್ದು, ಮನೆ ಮನೆ ಬೇಟಿ ದೃಷ್ಟಿ ದೋಷಗಳನ್ನು ಮನೆ ಹಂತದಲ್ಲೆ ಗುರುತಿಸಿ ಚಿಕಿತ್ಸೆ ಒಳಪಡಿಸಲಾಗುತ್ತದೆ ಎಂದರುನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್ ಮಾತನಾಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುನಂದಾ ದೇವಿ, ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ನೇತ್ರಾಧಿಕಾರಿ ರಾಮು,  ಪುಷ್ಪಲತಾ, ಶುಷ್ರೂಷಣಾಧಿಕಾರಿಗಳಾದ ಲಕ್ಷ್ಮಿ, ರವಿಕುಮಾರ್ ಸಾರ್ವಜನಿಕರು ಡಿಪೆÇ್ಲಮಾ ವಿದ್ಯಾರ್ಥಿಗಳು ಇದ್ದರು.