ಪುನೀತ್ ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ
ಸಂಜೆವಾಣಿ ವಾರ್ತೆ
ದಾವಣಗೆರೆ. ಮಾ.೧೮; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ, ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗ, ಹರಗನಹಳ್ಳಿ ಹರಿಹರ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳೂಡಿ, ಸಾರ್ವಜನಿಕ ಆಸ್ಪತ್ರೆ ಹರಿಹರ ಐ ಸಿ ಟಿ ಸಿ ವಿಭಾಗ ಇವರುಗಳ ಸಹಯೋಗದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹರಗನಹಳ್ಳಿ ಗ್ರಾಮದಲ್ಲಿ ಆಯೋಜಿ ಸಲಾಗಿತ್ತು. ಈ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆಯ ವೈದ್ಯಾಧಿಕಾರಿಗಳಾದ ಡಾ. ಪಿ ಕೆ ಬಸವರಾಜ್, ಡಾ. ಸಂಜಯ್ ಬಿ ಎಂ , ಸಂಚಾಲಕರು ಮತ್ತು ಆಪ್ತಸಮಾಲೋಚಕರಾದ ಶಿವಕುಮಾರ ಎನ್ ಜಿ, ಪ್ರಯೋಗಶಾಲಾ ಮೇಲ್ವಿಚಾರಕರಾದ ವಿನಾಯಕ ಆರ್, ಪ್ರಯೋಗಶಾಲಾ ತಂತ್ರಜ್ಞರಾದ ಜ್ಯೋತಿ ಕೆ ಗುಡ್ಡದ್ , ವಿನಯ್ ಕುಮಾರ್ ಓ ಎಸ್, ಕೊಟ್ರೇಶ್ ಇತರರು ಹಾಜರಿದ್ದರು.ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಹರಗನಹಳ್ಳಿ ಗ್ರಾಮದದ ಸದಸ್ಯರಾದ ಅಶೋಕ್ ಕುಮಾರ್, ಚಂದ್ರು ಗೌಡ – ಗ್ರಾಮ ಪಂಚಾಯತಿ ಸದಸ್ಯರು, ಸುನೀಲ್, ಸಂತೋಷ್, ಸಂದೀಪ್, ಅಂಗನವಾಡಿ ಕಾರ್ಯಕರ್ತೆಯರಾದ ಪ್ರಿಯಾಂಕ, ಆಶಾ ಕಾರ್ಯಕರ್ತೆಯರಾದ ರೇಣುಕ ಎನ್ ಹಾಗೂ ಇತರೆ ಸದಸ್ಯರು, ಗ್ರಾಮಸ್ಥರು ಇದ್ದರು.
