ಪದೇ-ಪದೇ ಚುನಾವಣೆಗಳ ನಡುವೆ ರಂಗಭೂಮಿ ಕಲಾವಿದರ ಬದುಕು ಮುಪ್ಪು
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೧೮- ಚುನಾವಣೆ ನಡೆದು ಉತ್ತಮ ಜನ ಪ್ರತಿನಿದಿಗಳನ್ನು ನಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿ ಆಯ್ಕೆ ಮಾಡುವುದು ಸ್ವಾಗತಾರ್ಹ ಆದರೆ ಪದೆ ಪದೇ ಚುನಾವಣೆಗಳು ಬರುವುದರಿಂದ ಚುನಾವಣಾ ನೀತಿ ಸಂಹಿತೆ ಎದುರಿಸುವ ಪ್ರಸಂಗ ಬಣ್ಣದ ಬದುಕಿನ ರಂಗಭೂಮಿ ಕಲಾವಿದರಿಗೆ ಸಿಗುವ ಆರೇಳು ತಿಂಗಳ ಬದುಕಿನ ಬಂಡಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿಗೆ ತರಲಿದೆ ಇದರಿಂದ ಒಂದೇ ರಾಷ್ಟ್ರ, ಒಂದೇ ಚುನಾವಣೆ ಮಾಡಿದರೆ ರಂಗ ಭೂಮಿ ಕಲಾವಿದರಂತೆ ಅನೇಕರ ಬದುಕು ಹಸನಾಗುತ್ತದೆ ಎಂದು ಕಲಾವಿದರ ಪರವಾಗಿ ಸರ್ಕಾರಗಳಿಗೆ ಕಲಾವಿದರಾದ ಶ್ರೀಪುಟ್ಟರಾಜ ಗವಾಯಿ ಮೆಲೋಡಿಸ್ ತಂಡದ ಗಾಯಕರಾದ ಹನುಮೇಶ ಬೇರ್ಗಿ ಗಾಯಕರು ಹಾಗೂ ಪ್ಯಾಡ್ ಮಾಸ್ಟರ್ ಲಾಲ್ ಸಾಬ ಬೋಗಾಪುರ ಪತ್ರಿಕೆ ಮನವಿ ಮಾಡಿದರು.
ಅವರು ಸಂಜೆ ವಾಣಿ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಜಾತ್ರೆ, ಹಬ್ಬದ ದಿನಗಳಲ್ಲಿ ರಂಗ ಭೂಮಿ ಕಲಾವಿದರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದೂ ಇಂತಹ ಸಮಯ ದಲ್ಲಿ ಪದೇ-ಪದೇ ಚುನಾವಣೆಗಳು ಬಂದಲ್ಲಿ ಬಣ್ಣದ ಬದುಕಿನ ಕಲಾವಿದರಿಗೆ ಚುನಾವಣಾ ನೀತಿ ಸಂಹಿತೆ ಹೆದುರಿಸುವ ನಿಟ್ಟಿನಲ್ಲಿ ತಮ್ಮ ಬದುಕಿನ ಜೀವನ ಕೀಲು ಕಿತ್ತ ಬಂಡಿಯಂತಾಗಲಿದೆ ಪ್ರಜಾಪ್ರಭುತ್ವ ಭಾರತದಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾ ಯಿಸಿ ತಮಗೆ ಬೇಕಾದ ಜನಪ್ರತಿನಿದಿನಗಳನ್ನು ಆಯ್ಕೆ ಮಾಡಬೇಕಾಗಿರುವುದು ಸಂತಸವೇ ಆದರೆ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಬೇರೆ ಬೇರೆ ಎಂಬಂತೆ ಪದೇ ಪದೇ ಚುನಾವಣೆ ನಡೆಯುತ್ತಿದ್ದರೆ ಬಣ್ಣದ ಬದುಕಿನ ರಂಗಭೂಮಿ ಕಲಾವಿದರ ಬದುಕು ಚುನಾವಣೆಗಳ ನಡುವೆ ಮುಪ್ಪಾಗಲಿದೆ.
ಕಲಾವಿದರ ಬದುಕು ಸೇರಿದಂತೆ ಬಡವರ ಜೀವನದ ಸುಗಮದ ಹಾದಿಗೆ ಒಂದೇ ರಾಷ್ಟ್ರ, ಒಂದೇ ಚುನಾವಣೆ ಎನ್ನುವ ನಿಟ್ಟಿನಲ್ಲಿ ಬಂದರೆ ರಂಗಭೂಮಿ ಕಲಾವಿದರು ಸೇರಿದಂತೆ ಎಲ್ಲರೂ ಸ್ವಾಗತ ಮಾಡಲಾಗುವುದಾಗಿ ಕಲಾವಿದರ ಪರವಾಗಿ ಸರ್ಕಾರಗಳಿಗೆ ಮನವಿ ಮಾಡುತ್ತಾ ನಮ್ಮಗಳ ಈ ಮಮವಿಗೆ ಸ್ಪಂದನೆ ನೀಡಬೇಕು ಎಂದು ತಿಳಿಸಿದರು.