ಪುನೀತ ೪೯ ನೇ ಹುಟ್ಟು ಹಬ್ಬ ಆಚರಣೆ
ರಾಯಚೂರು.ಮಾ.೧೮- ದೇವರಂತ ವ್ಯಕ್ತಿ ಶ್ರೀ ಪುನೀತ ರಾಜಕುಮಾರ್ ಅವರ ೪೯ ನೇ ಹುಟ್ಟು ಹಬ್ಬವನ್ನು ದೇವರಂತ ಹಿರಿಯ ನಾಗರಿಕರ ಜೊತೆ ಆಚರಿಸಲಾಯಿತು.
ನಗರದಲ್ಲಿ ರಾತ್ರಿ ಊಟ ವ್ಯವಸ್ಥೆ ಮಾಡಿ ಕೇಕ್ ಕತ್ತರಿಸುತ್ತಾ, ಸಮಾಜ ಸೇವೆ ಮುಖಾಂತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಬಡವರಿಗೆ ಹಾಗೂ ಹಿರಿಯ ನಾಗರಿಕರಿಗೆ, ಅನಾಥ ಮಕ್ಕಳಿಕೆ ನೇರವಾಗಿದ್ದತಹ ನಮ್ಮ-ನಿಮ್ಮೆಲ್ಲರ ನೆಚ್ಚಿನ ದೊಡ್ಮನೆ ಹುಡುಗನ ಜನುಮ ದಿನ ಆಚರಿಸಲು ನಮ್ಮೆಲ್ಲರಿಗೆ ಎಲ್ಲಿಲ್ಲದ ಸಂತೋಷವಾಗುತ್ತಿದೆ. ನಮ್ಮ ನಿಮ್ಮೆಲ್ಲರ ನಡುವೆ ಇಂದಿಗೂ ಪುನೀತ್ ಅಮರ ಅನ್ನುವಂತಹ ಅನುಭವ ಉಂಟಾಗುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಪುನೀತ ರಾಜಕುಮಾರ್ ಅಭಿಮಾನಿಗಳಾದ ಲಕ್ಷ್ಮಿ ನರಸಿಂಹ ಮೈದರ್ಕರ್, ವಿನಯ್ ಕುಮಾರ್, ರಾಕೇಶ್, ಲಲಿತ ಹಿರಿಯ ನಾಗರಿಕರ ಮನೆ ಪಧಾಧಿಕಾರಿಗಳು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.