ಲೋಕಸಭೆ ಚುನಾವಣೆ: ರಾಜಕೀಯ ಪಕ್ಷಗಳೊಂದಿಗೆ ಸಭೆಪಾರದರ್ಶಕ ಚುನಾವಣೆ ನಡೆಸಲು ಚುನಾವಣಾ ನಿಯಮ ಕಡ್ಡಾಯವಾಗಿ ಪಾಲಿಸಿ
ರಾಯಚೂರು.ಮಾ.೧೮- ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ಚುನಾವಣಾ ನಿಯಮಗಳನ್ನು ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಹೇಳಿದರು.
ಅವರು ನಿನ್ನೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜೀಕಯ ಪಕ್ಷಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿ, ಈಗಾಗಲೇ ಭಾರತ ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಏ.೪ರಂದು ನಾಮಪತ್ರ ಅಧೀಸೂಚನೆ ಹೊರಡಿಸಲಾಗುವುದು, ಏ.೧೯ರಂದು ನಾಮ ಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಏ.೨೦ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.೨೨ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯಬಹುದಾಗಿದೆ. ಉಳಿದಂತೆ ಮೇ.೭ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಜೂ.೪ರಂದು ದೇಶದಾದ್ಯಂತ ಮತ ಎಣ ಕೆ ಪ್ರಕ್ರಿಯೆ ಜರುಗಲಿದೆ ಎಂದು ತಿಳಿಸಿದರು.
ನಾಮ ಪತ್ರ ಸಲ್ಲಿಸಲು ಏ.೪ರಂದು ಅಧಿಸೂಚನೆ ಹೊರಡಿಸಲಾಗುವುದು ನಂತರ ಬೆಳಿಗ್ಗೆ ೧೧:೦೦ಗಂಟೆಯಿಂದ ಮದ್ಯಾಹ್ನ ೩:೦೦ಗಂಟೆಯವರೆಗೆ ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಾಮಪತ್ರ ಸ್ವೀಕೃತಿ ಕೊಠಡಿಯಲ್ಲಿ ಸ್ವೀಕರಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ಅಭ್ಯರ್ತಿಯನ್ನು ಒಳಗೊಂಡು ಐದು ಜನರಿಗೆ ಮಾತ್ರ ಅವಕಾಶವಿದ್ದು, ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ೧೦೦ ಮೀಟರ್ ಅಂತರದಲ್ಲಿ ೩ ವಾಹನಗಳನ್ನು ಮಾತ್ರ ಒಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಧಪಟ್ಟಂತೆ ೮ ಕ್ಷೇತ್ರಗಳಿದ್ದು, ಶೋರಪುರ, ಶಾಹಪುರ, ಯಾದಗಿರಿ, ರಾಯಚೂರು ಗ್ರಾಮೀಣ, ರಾಯಚೂರು ನಗರ ಕ್ಷೇತ್ರ, ಮಾನವಿ, ದೇವದುರ್ಗ ಮತ್ತು ಲಿಂಗಸುಗೂರು ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಈ ಎಲ್ಲಾ ಕ್ಷೇತ್ರಗಳ ಕ್ಷೇತ್ರಗಳಲ್ಲಿ ಒಟ್ಟು ೨೨೦೩ ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಒಟ್ಟು ೧೯,೯೩,೭೫೫ ಮತದಾರರಿದ್ದು, ೯,೮೫,೬೭೫ ಪುರುಷ ಮತದಾರರು, ೧೦,೦೫,೨೪೬ ಮಹಿಳಾ ಮತದಾರರಿದ್ದು, ೨೯೭ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ೩೩೪ ಸೇವಾ ಮತದಾರರಿದ್ದಾರೆ. ಇದರಲ್ಲಿ ೪೨,೩೯೪ ಯುವ ಮತದಾರರಿದ್ದು, ೨೨,೮೫೭ ವಿಕಲಚೇತನ ಮತದಾರರಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಯ ಉಲ್ಲಂಘನೆಗಾಘಿ ಮತ್ತು ವಿವಿಧ ವಿಷಯಗಳಿಗಾಗಿ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ೧೯೫೦ಗೆ ಕರೆ ಮಾಡುವ ಮೂಲಕ, ಸಿವಿಜಿಲ್ ಆ?ಯಪ್ ಅಥವಾ ಇತರೆ ಮಾಧ್ಯಮದ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.
ಲೋಕಸಭಾ ಚುನಾವಣೆಗೆ ೪೦೦೬ ಬಿಯು, ೨೭೩೬ ಸಿಯು ಹಾಗೂ ೨೮೬೯ ವಿವಿಪ್ಯಾಟ್‌ಗಳು ಸ್ವೀಕೃತಿಯಾಗಿದ್ದು, ಈ ಎಲ್ಲಾ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯವು ಪೂರ್ಣಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ೫ ಅಂತರಾಜ್ಯ , ೯ ಅಂತರ ಜಿಲ್ಲೆ ಹಾಗೂ ೯ ಚೆಕ್‌ಪೋಸ್ಟ್ಗಳನ್ನು ಜಿಲ್ಲೆಯ ಒಳಗೆ ಸ್ಥಾಪಿಸಲಾಗಿದ್ದು, ಇದರ ನಿರ್ವಹಣೆಯನ್ನು ೨೪/೭ ಸಿಎಪಿಎಫ್ ಹಾಗೂ ಜಾರಿ ಸಂಸ್ಥೆಗಳು ನಿಗವಹಿಸಲಾಗುವುದು. ಎಂದರು.
ಒಟ್ಟಾರೆಯಾಗಿ ಲೋಕಸಭೆ ಚುನಾಚಣೆಯನ್ನು ನ್ಯಾಸಮ್ಮತ ಹಾಗೂ ಮುಕ್ತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಾರ್ಯಾಲಯದಿಂದ ನೀಡಲಾಗುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಶಾಖೆಯ ಶಿರಸ್ತೆದಾರ ರಿಷಿಕೇಶ, ವಿಷಯ ನಿರ್ವಾಹಕ ರಮೇಶ, ತಾಂತ್ರಿಕ ಆಧಿಕಾರಿ ಶಿವಕುಮಾರ, ರಾಜಕೀಯ ಪಕ್ಷಗಳ ಮುಖಂಡರಾದ ಕೆ.ತಿರುಮಲರೆಡ್ಡಿ, ಶಂಕರ ಕಲ್ಲೂರು, ರವಿಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.