ವಾಹನ ತಪಾಸಣೆ ಬಿಗಿ
ನವಲಗುಂದ,ಮಾ.18: ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಇಲ್ಲಿನ ಚೆಕ್‍ಪೆÇೀಸ್ಟ್‍ನಲ್ಲಿ ವಾಹನ ತಪಾಸಣೆ ಬಿಗಿಗೊಳಿಸಲಾಗಿದ್ದು, ಅಧಿಕಾರಿಗಳು ಹಗಲು ರಾತ್ರಿ ಪಾಳಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಧಾನಸಭಾ ಕ್ಷೇತ್ರವ್ಯಾಪ್ತಿಯ ನವಲಗುಂದ ಹೊರವಲಯದ ನರಗುಂದ ರೋಣ ಕ್ರಾಸ್ ಬಳಿ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಅಣ್ಣಿಗೇರಿ ಗದಗ ರಸ್ತೆಯಲ್ಲಿ ಚೆಕ್ ಪೆÇೀಸ್ಟ್ ತೆರೆಯಲಾಗಿದ್ದು. ಎರಡು ಚೆಕ್‍ಪೆÇೀಸ್ಟ್ ಗಳಲ್ಲಿ ಬಿಗಿ ತಪಾಸಣೆ ಆರಂಭಿಸಲಾಗಿದೆ.
ನವಲಗುಂದ ಹಾಗೂ ಅಣ್ಣಿಗೇರಿ ಸಂಪರ್ಕಿಸುವ ಎಲ್ಲ ಒಳ ರಸ್ತೆಗಳಲ್ಲಿ ಕೂಡ ಪೆÇಲೀಸ್ ಬೀಟ್ ಅಳವಡಿಸಲಾಗಿದೆ. ಹಣ, ವಸ್ತು ಸಾಗಾಟ ಸೇರಿದಂತೆ ಎಲ್ಲಬಗೆಯ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಬ್ಯಾನರ್ ತೆರವು : ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿದ್ದಂತೆ ಪುರಸಭೆ ಸಿಬ್ಬಂದಿಗಳು ಜನಪ್ರತಿನಿಧಿಗಳ ಭಾವಚಿತ್ರವಿರುವ ಮತ್ತು ಸರಕಾರದ ಸಾಧನೆ ತಿಳಿಸುವ ಬ್ಯಾನರ್, ಫ್ಲೆಕ್ಸ್‍ಗಳನ್ನು ತೆರವು ಮಾಡಿದ್ದಾರೆ . ಜನಪ್ರತಿನಿಧಿಗಳ ಫೆÇೀಟೋಗಳು ಕೆಲವೊಂದು ಜಾಗಗಳಲ್ಲಿ ಅಚ್ಚಾಗಿದ್ದ ಸಂದರ್ಭದಲ್ಲಿ ಅವುಗಳಿಗೆ ಬಣ್ಣ ಹಚ್ಚಿ ಮುಚ್ಚುವ ಕೆಲಸ ಮಾಡಲಾಗಿದೆ.