ವೇಳಾಪಟ್ಟಿ ಪ್ರಕಟ : ನೀತಿ ಸಂಹಿತೆ ಜಾರಿ
ಬಾದಾಮಿ,ಮಾ.18: ಭಾರತ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ-2024 ಘೋಷಿಸಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಚುನಾವಣೆಗೆ ಜಿಲ್ಲಾಡಳಿತ ಸೇರಿದಂತೆ ತಾಲೂಕಾಡಳಿತ ಸಕಲ ಸನ್ನದ್ದವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ದುರ್ಗೆಶ ತಿಳಿಸಿದರು.
ನಗರದ ತಹಶೀಲದಾರ ಕಚೇರಿಯ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಎಪ್ರೀಲ್ 12 ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಎಪ್ರೀಲ್ 19 ಆದರೆ ನಾಮಪತ್ರ ಪರಿಶೀಲನೆ ಏಪ್ರಿಲ್ 20 ಆಗಿರುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ಏಪ್ರಿಲ್ 22 ಆಗಿದ್ದು, ಮತದಾನ ಮೇ 7 ರಂದು ನಡೆಯಲಿದೆ. ಮತ ಎಣಿಕೆ ಜೂನ್ 4 ರಂದು ನಡೆಯಲಿದೆ. ಚುನಾವಣಾ ಆಯೋಗ ಈ ಬಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಗೆ ಒಟ್ಟು ರೂ.95 ಲಕ್ಷ ವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬಾದಾಮಿ ಮತಕ್ಷೇತ್ರದಲ್ಲಿ ಒಟ್ಟು 224901 ಮತದಾರರಿದ್ದು, ಅದರಲ್ಲಿ 112748 ಪುರು?Àರು, 112139 ಮಹಿಳಾ ಮತದಾರರು ಇದ್ದಾರೆ. ಅಂಗವೈಫಲ್ಯ ಮತದಾರರು 2788 ಇದ್ದಾರೆ. ಸೇವಾ ಮತದಾರರು 1545 ಇದ್ದಾರೆ. ಮತದಾರರ ಪರಿ?À್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 260 ಮತಗಟ್ಟೆಗಳಿವೆ ಎಂದರು. ತಹಶೀಲದಾರ ಜೆ.ಬಿ.ಮಜ್ಜಗಿ, ಸಿಪಿಐ ಕರೆಪ್ಪ ಬನ್ನೆ, ಚುನಾವಣೆ ವಿಭಾಗದ ಶಿರಸ್ತೆದಾರ ಗಿರೀಶ ಮೆದಿಕೇರಿ ಹಾಜರಿದ್ದರು.