ಎಂಪಿ ಚುನಾವಣೆಗೆ 253 ಮತಗಟ್ಟೆಗಳು; ತಾಲೂಕಿನ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್,

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.18; ತಾಲೂಕು ಆಡಳಿತದಿಂದ ತಾಲೂಕಿನ ವಿವಿಧ ಭಾಗದಲ್ಲಿ ಮೂರು ಚೆಕ್‌ಪೋಸ್ಟ್ಗಳನ್ನು ಭಾನುವಾರ ಸ್ಥಾಪನೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಎಸಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.ನಂದಿಬೇವೂರು, ಕೂಲಹಳ್ಳಿ, ಮತ್ತಿಹಳ್ಳಿ ಗ್ರಾಮಗಳ ಬಳಿ ಚೆಕ್ಪೋಸ್ಟ್ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.ಯಾವುದೇ ವ್ಯಕ್ತಿಯಾಗಲಿ, ವಾಹನಗಳಲ್ಲಾಗಲಿ 2 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗುತ್ತಿದ್ದರೆ, ಅದಕ್ಕೆ ಸೂಕ್ತ ದಾಖಲೆ ನೀಡಬೇಕಾಗುತ್ತದೆ ಎಂದ ಅವರು ದ್ವಿಚಕ್ರವಾಗಲಿ, ನಾಲ್ಕು ಚಕ್ರವಾಹನಗಳಲ್ಲಾಗಲಿ 2 ಲಕ್ಷಕ್ಕಿಂತ ಹೆಚ್ಚು ಹಣ ಕೊಂಡೊಯ್ಯುವAತಿಲ್ಲ ಎಂದು ಅವರು ಹೇಳಿದರು.253 ಮತಗಟ್ಟೆಗಳು: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ, ಅದರಲ್ಲಿ 70 ಕ್ರಿಟಿಕಲ್ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದ ಅವರು ಸದ್ಯ 2,21851 ಮತದಾರರಿದ್ದು, ನಾಮಪತ್ರ ಸಲ್ಲಿಸಲು ಒಂದು ವಾರ ಇರುವವರೆಗೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಬಹುದು ಎಂದರು.85 ವರ್ಷ ವಯಸ್ಸಾದ ಹಿರಿಯ ನಾಗರೀಕರಿಗೆ ಹಾಗೂ ಶೇ.40 ರಷ್ಟು ವಿಕಲಚೇತನರಿಗೆ ಅವರು ಬಯಸಿದರೆ ಮತ ಚಲಾಯಿಸಲು ಮತಪತ್ರವನ್ನು ಅವರ ನಿವಾಸಕ್ಕೆ ಸಿಬ್ಬಂದಿ ಮೂಲಕ ಕಳಿಸಲಾಗುವುದು ಎಂದು ಅವರು ಹೇಳಿದರು.