ಬಹು ಸಾಂಸ್ಕøತಿಕತೆ ತರುವ ಅನುವಾದ:ಪೆÇ್ರ.ಇಂದ್ರಾಣಿ ಮುಖರ್ಜಿ
ಕಲಬುರಗಿ,ಮಾ.18: ಅನುವಾದವು ಮನಸ್ಸನ್ನು ವಿಮೋಚನೆಗೊಳಿಸಲು ಮತ್ತು ವಸಾಹಾತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಮಾಡುತ್ತದೆ, ಅಲ್ಲದೆ ಇದು ಒಳಗೊಳ್ಳುವಿಕೆ, ಮಾನವತಾವಾದ ಮತ್ತು ಬಹುಸಾಂಸ್ಕøತಿಕತೆಯನ್ನು ತರುತ್ತದೆ. ಮತ್ತು ಪಿತೃಪ್ರಭುತ್ವ, ಏಕಸಂಸ್ಕøತಿ ಮತ್ತು ಜನಾಂಗೀಯತೆಯನ್ನು ಮುರಿಯಲು ಸಹಾಯ ಮಾಡುತ್ತದೆ ಎಂದು ನವದೆಹಲಿಯ ಜೆಎನ್‍ಯುನ ಪೆÇ್ರ.ಇಂದ್ರಾಣಿ ಮುಖರ್ಜಿ ಹೇಳಿದರು. ಅವರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಮೈಸೂರಿನ ಸಿಐಐಎಲ್ನ ರಾಷ್ಟ್ರೀಯ ಅನುವಾದ ಮಿಷನ್, ಸಹಯೋಗದಲ್ಲಿ ಆಯೋಜಿಸಿದ್ದ ಒಂದು ವಾರದ ಭಾರತೀಯ ಭಾಷೆಗಳಲ್ಲಿ ಭಾಷಾಂತರ ಕುರಿತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.ಅನುವಾದ ಸಾಮಾನ್ಯವಾಗಿ ನಮಗೆ ಆಸಕ್ತಿ ಇರುವ ವಿಷಯದ ಕುರಿತು ಮಾಡುತ್ತೇವೆ. ಕೆಲವೊಮ್ಮೆ ಪ್ರಾಯೋಜಿಸಿದ ವಿಷಯದ ಕುರಿತ ಮಾಡಬೇಕಾಗುತ್ತದೆ. ಇದು ವಿಭಿನ್ನ ದೃಷ್ಟಿಕೋನಗಳು, ಪರಿಸ್ಥಿತಿ, ಆಲೋಚನೆಗಳನ್ನು ತರಲು ಸಹಾಯ ಮಾಡುತ್ತದೆ. ಇದು ಬರಹಗಾರನನ್ನು ಜಾಗತಿಕ ನಾಗರಿಕನನ್ನಾಗಿ ಮಾಡುತ್ತದೆ. ಅನುವಾದಕನು ಅನೇಕ ಸಂಸ್ಕೃತಿ ಮತ್ತು ಭಾಷೆಗಳನ್ನು ತಿಳಿದುಕೊಳ್ಳುತ್ತಾನೆ. ಭಾಷೆಯು ಪರಮಾಣು ಬಾಂಬ್ ಇದ್ದಂತೆ, ಅದು ಅರ್ಥಗಳನ್ನು ಹೊರಸೂಸುತ್ತದೆ ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಹರಡುತ್ತದೆ ಎಂದು ಹೇಳಿದರು.
ಮೂಲತೆಯು ಅಂತ್ಯ ವಿಲ್ಲದ್ದು. ಸ್ವಂತಿಕೆಗೆ ಕೊನೆ ಎಂಬುದಿಲ್ಲ. ಅನುವಾದವು ಒಂದು ಕಾರ್ಯದ ಹೊರತಾಗಿ, ಅದು ಒಂದು ಸಿದ್ಧಾಂತವಾಗಿದೆ. ಇದಕ್ಕೆ ಅನೇಕ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಬಹಳಷ್ಟು ಓದುವಿಕೆಯ ಅಗತ್ಯವಿದೆ. ಅನುವಾದಕನು ಯಾವುದರಲ್ಲಿಯು ಪರಿಪೂರ್ಣತೆ ಹೊಂದದೆಯಿದ್ದರೂ ಪರವಾಗಿಲ್ಲ ಎಲ್ಲವನ್ನು ಅರಿತವನಾಗಿರಬೇಕು ಎಂದು ಹೇಳಿದರು.ಗೌರವ ಅತಿಥಿ ಮತ್ತು ರಾಷ್ಟ್ರೀಯ ಅನುವಾದ ಮಿಷನ್, ಸಿಐಐಎಲ್, ಮೈಸೂರಿನ ಅಧಿಕಾರಿ ಡಾ. ತಾರಿಕ್ ಖಾನ್ ಈ ಸಂದರ್ಭದಲ್ಲಿ ಮಾತನಾಡಿದರು.ಕುಲಪತಿ ಪೆÇ್ರ.ಬಟ್ಟುಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಿ ಕಾದಂಬರಿಗಳನ್ನು ಅನುವಾದಿಸಿದರೆ ಸಾಲದು. ನಾವು ವೈಜ್ಞಾನಿಕ, ತಾಂತ್ರಿಕ ಆವಿಷ್ಕಾರಗಳು ಮತ್ತು ಬರಹಗಳು, ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳು ಮತ್ತು ನೀತಿಗಳನ್ನು ಭಾಷಾಂತರಿಸಬೇಕು. ಮಾತೃಭಾಷೆಯಲ್ಲಿ ಸಾಹಿತ್ಯ ಲಭ್ಯವಾಗದ ಕಾರಣ ಅನೇಕ ಜನರು ಅದರ ಪ್ರಯೋಜನ ಮತ್ತು ನ್ಯಾಯದಿಂದ ವಂಚಿತರಾಗಿದ್ದಾರೆ ಎಂದರು.ಇದಕ್ಕೂ ಮುನ್ನ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪೆÇ್ರ.ವಿಕ್ರಂ ವಿಸಾಜಿ ಅವರು ಕಾರ್ಯಾಗಾರದ ಕುರಿತು ಮಾತನಾಡಿದರು.ಕಾರ್ಯಕ್ರಮದ ಸಂಯೋಜಕಿ ಡಾ.ಅಂಕಿತಾ ಸತ್ಪತಿ ಸ್ವಾಗತಿಸಿದರು, ಡಾ.ಕುಮಾರ್ ಮಂಗಲಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಡಾ.ಸ್ವಪ್ನಿಲ್ ಚಾಪೇಕರ್ ಪ್ರಾರ್ಥನಾ ಗೀತೆಯನ್ನು ಹಾಡಿದರು. ಪೆÇ್ರ. ಶಿವಗಂಗಾ ರೂಮ್ಮಾ, ಪೆÇ್ರ. ಸುನಿತಾಮಂಜನ ಬೈಲ್, ಪೆÇ್ರ.ಭೀಮರಾವ ಭೋಸಲೆ ಮತ್ತು ಅತಿಥಿಗಳು ಉಪಸ್ಥಿತರಿದ್ದರು.