ರೇಣುಕಾಚಾರ್ಯರು ತತ್ವಾದರ್ಶ ಭವಿಷ್ಯಕ್ಕೆ ಬುನಾದಿ
ವಿಜಯಪುರ.ಮಾ೧೮:ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶಗಳು , ಸಂಸ್ಕಾರ, ಸಂಸ್ಕೃತಿಗಳು ನಮ್ಮೆಲ್ಲರ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ಎಂದು ಪುರಸಭಾ ಅಧ್ಯಕ್ಷೆ ವಿಮಲ ಬಸವರಾಜ್ ತಿಳಿಸಿದರು.
ಇವರು ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭೆ ವತಿಯಿಂದ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ವ ನಮನ ಸಲ್ಲಿಸಿ ಮಾತನಾಡಿದರು.
ಧರ್ಮದಿಂದಲೇ ವಿಶ್ವಶಾಂತಿ: ಧರ್ಮದಿಂದಲೇ ವಿಶ್ವಶಾಂತಿ ಎಂಬುದನ್ನು ಎಲ್ಲರೂ ಅರಿಯಬೇಕು.ಕಾಯಕ ಮತ್ತು ದಾಸೋಹ ಭಾವನೆ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರು. ಮಹಾಮುನಿ ಅಗಸ್ಯರಿಗೆ ಶಿವಾತ ಸಿದ್ಧಾಂತವನ್ನು ಬೋಧನೆಗೈದು ಅಸ್ಪಶ್ಯದ್ಧಾರಗಗೈದ ಕಾರಣ ಪುರುಷರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಮಿಗಿಲೆಂದು ಸಾರಿದ ಪರಮಾಚಾರ್ಯರು. ಜಾತಿ, ಮತ, ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಕಾರುಣ್ಯಶೀಲರು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದರು.
ಪುರಸಭಾ ಸದಸ್ಯ ಹನೀಪುಲ್ಲ ಮಾತನಾಡಿ, ಮನುಷ್ಯರು ಮಹಾದೇವರಾಗುವ ಮಾರ್ಗವನ್ನು ಹಾಕಿಕೊಟ್ಟವರಲ್ಲಿ ರೇಣುಕಾಚಾರ್ಯ ಮೊದಲಿಗರು. ಸಾಮಾಜಿಕ, ಲಿಂಗ ಸಮಾನತೆಗೆ ಹೆಚ್ಚಿನ ಮನ್ನಣೆ ನೀಡಿ ಅದನ್ನು ಸರ್ವರೂ ಅನುಸರಿಸುವಂತೆ ಕರೆಕೊಟ್ಟಿದ್ದರು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಉಪಾಧ್ಯಕ್ಷ ಕೇಶವಪ್ಪ, ವೀರಶೈವ ಮುಖಂಡ ಬಸವರಾಜ್, ಪುರಸಭಾ ಸದಸ್ಯರಾದ ನಾರಾಯಣಸ್ವಾಮಿ, ಶ್ರೀರಾಮಪ್ಪ, ಮಂಜುಳ ಮುನಿರಾಜ್, ಮಾಜಿ ಪುರಸಭಾ ಸದಸ್ಯ ಮುನಿರಾಜ್, ಮಾಂತೇಶ್ ಪುರಸಭಾ ಸಿಬ್ಬಂದಿ ಹಾಗೂ ವೀರಶೈವ ಸಮಾಜದವರು ಹಾಜರಿದ್ದರು.