ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮ
ಆನೇಕಲ್.ಮಾ.೧೮:ಯಾವ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾದ್ಯಾನತೆ ನೀಡುತ್ತಾರೆ ಅಂತಹ ದೇಶಗಳು ಅಭಿವೃದ್ದಿಯತ್ತಾ ಸಾಗಲು ಸಾಧ್ಯವಿದೆ ಎಂದು ವೈಟ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಆನೇಕಲ್ ದೊಡ್ಡಯ್ಯರವರು ತಿಳಿಸಿದರು.
ಅವರು ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ತಿರುಪಾಳ್ಯ ಗ್ರಾಮದ ಬಳಿಯಿರುವ ವೈಟ್ ಅಕಾಡೆಮಿ ಶಾಲೆಯಲ್ಲಿ ನಡೆದ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈವತ್ತಿನ ಸ್ವರ್ದಾತ್ಮಕ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ ಇಂತಹ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯವಾಗಿದ್ದು. ನಮ್ಮ ಶಾಲೆಯಲ್ಲಿ ಕಲಿಕೆಯ ಜೊತೆ ಜೊತೆಗೆ ವ್ಯಕ್ತಿ ವಿಕಸನ ಸಂಬಂದಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಜೊತೆಗೆ ಉತ್ತಮ ಕೊಠಡಿಗಳು, ನುರಿತ ಶಿಕ್ಷಕರು, ಉತ್ತಮ ಪರಿಸರ, ಕ್ರೀಡೆಗಳಿಗೆ ಹೆಚ್ಚು ಉತ್ತೇಜನ, ಹೈಟೆಕ್ ಲ್ಯಾಬ್, ಕಂಪ್ಯೂಟರ್ ಶಿಕ್ಷಣ, ಸ್ಮಾಟ್ ತರಗತಿಗಳು ಸೇರಿದಂತೆ ಕಲಿಕೆಗೆ ಬೇಕಾದ ಎಲ್ಲಾ ರೀತಿಯಾದ ವ್ಯವಸ್ಥೆಯನ್ನು ನಮ್ಮ ವೈಟ್ ಅಕಾಡೆಮಿ ಶಾಲೆಯಲ್ಲಿ ಮಾಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಇನ್ನಷ್ಠು ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿರೂಪಕಿ ಶೃತಿ, ವೈಟ್ ಅಕಾಡೆಮಿಯ ಶ್ರೀಮತಿ ಅರುಣಾ ಕುಮಾರಿ, ಪ್ರಾಂಶುಪಾಲರಾದ ಮಂಜುಳ, ಶಾಲೆಯ ರಾಕೇಶ್ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಬಾಗವಹಿಸಿದ್ದರು.