ಟೆನ್ನಿಸ್ ಕೋರ್ಟ್ ಉದ್ಘಾಟಿಸಿದ ಸುರೇಶ್‌ನಾರಾಯಣ ಕುಟ್ಟಿ
ಕೆಜಿಎಫ್:ಮಾ:೧೮: ಕ್ರೀಡೆಗೆ ಕೆಜಿಎಫ್ ಕ್ಷೇತ್ರವು ಬಹಳ ಖ್ಯಾತಿಗಳಿಸಿದ್ದು ರಾಜ್ಯ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡಾಸ್ಪರ್ಧೆಗಳಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಕ್ರೀಡಾ ಪ್ರೇಮಿಗಳನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಒಳಾಂಗಣ ಟೇನಿಸ್ ಕೋರ್ಟ್‌ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮೀಸಲಾಗಿದೆ ಎಂದು ಕಾಸ್‌ಮೋಪಾಲಿಟಿನ್ ಕ್ಲಬ್‌ನ ಉಪಾಧ್ಯಕ್ಷ ಕೋಲಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಯಣಕುಟ್ಟಿ ಹೇಳಿದರು.
ನಗರದ ಕಿಂಗ್ ಜಾರ್ಜಹಾಲ್ ಅವರಣದಲ್ಲಿ ಸಂಸದ ಮುನಿಸ್ವಾಮಿ ರವರು ನೀಡಿದ ೫೩ ಲಕ್ಷ ಅನುದಾನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮೀಸಲಾಗಿದ್ದು ಸಂಸದ ಮುನಿಸ್ವಾಮಿ ರವರು ಕೋಲಾರ ಜಿಲ್ಲೆಯಲ್ಲಿ ಸಂಸದರಾದ ನಂತರ ಹಲವು ಸಾಧನೆಗಳನ್ನು ಮಾಡಿದ್ದಾರೆ ಅದರಲ್ಲೂ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಶಾಶ್ವತವಾಗಿ ಹೆಸರು ಉಳಿಯುವಂತಹ ಮಾರಿಕುಪ್ಪಂ ಕುಪ್ಪಂ ರೈಲ್ವೆ ಹಳಿ ಜೋಡಣಾ ಕಾಮಗಾರಿ ಸೇರಿದಂತೆ ಬಿಜಿಎಂಎಲ್ ಕಂಪನಿಯಲ್ಲಿ ನೌಕರಿ ಮಾಡಿದ ಎಸ್‌ಟಿಬಿಪಿ ಯೋಜನೆಯಡಿ ಸ್ವಯಂ ನಿವೃತ್ತಿಕೈಗೊಂಡ ೨೮೦೦ ಕಾರ್ಮಿಕರಿಗೆ ವಾಸ ಸ್ಥಳದ ದೃಡಿಕರಣದ ಹಕ್ಕು ಪತ್ರಗಳನ್ನು ವಿತರಿಸಿದ್ದು ಸಹ ಒಂದು ಸಾಧನೆ ಎಂದರು.
ಮಾಜಿ ನಗರ ಬಿಜೆಪಿ ಅಧ್ಯಕ್ಷ ಕಮಲನಾಥನ್ ಮಾತನಾಡಿ ಸಂಸದ ಮುನಿಸ್ವಾಮಿ ರವರು ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ಕ್ರೀಡಾಂಗಣವನ್ನು ನೀವೆ ಉದ್ಘಾಟಿಸಿ ಎಂದು ತಿಳಿಸಿದ್ದರಿಂದ ಸಾರ್ವಜನಿಕರ ಸಹಕಾರದೊಂದಿಗೆ ಕ್ರೀಡಾಂಗಣವನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು.
ಯುವಕರು ಇಂದು ದುಶ್ಚಟಗಳಿಗೆ ಬಲಿಯಾಗಿ ಹಾದಿ ತಪ್ಪುತ್ತಿದ್ದಾರೆ ಆದ್ದರಿಂದ ಅವರನ್ನು ಕ್ರೀಡೆಯತ್ತ ಸೇಳೆಯುವ ನಿಟ್ಟಿನಲ್ಲಿ ಟೆನಿಸ್ ಕೋರ್ಟ್ ನಿರ್ಮೀಸಲಾಗಿದ್ದು ಯುವಕರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿ ಕ್ಲಬ್‌ನ ಸದಸ್ಯರು ಅವರ ಮಕ್ಕಳು ಬಳಸಲು ಒಂದು ಶುಲ್ಕ ಹಾಗೂ ಕ್ಲಬ್ ಸದಸ್ಯರಲ್ಲದವರು ಸಹ ಕೋರ್ಟ್ ಬಳಸಿಕೊಳ್ಳಲು ಅತಿ ಕಡಿಮೆ ಶುಲ್ಕವನ್ನು ವಿಧಿಸಲಾಗುವುದು ಕೋರ್ಟ್‌ನ ನಿರ್ವಹಣೆಗಾಗಿ ಶುಲ್ಕವನ್ನು ಪಡೆಯಬೇಕಿರುವುದರಿಂದ ಅತಿ ಕಡಿಮೆ ದರವನ್ನು ಅತಿ ಶೀಘ್ರದಲ್ಲೇ ಕಮಿಟಿ ಸದಸ್ಯರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಮಾಜಿ ಅಧ್ಯಕ್ಷ ಜಯಪ್ರಕಾಶನಾಯ್ಡು, ರವಿಕುಮಾರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಾಂಡ್ಯನ್ ,ಬಾಬು ಕ್ಲಬ್‌ನ ಸದಸ್ಯರಾದ ತ್ಯಾಗರಾಜ್ ಹಾಗೂ ಇತರರು ಹಾಜರಿದ್ದರು