ದಿ.ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.18:- ಸಾವಿನ ನಂತರ ಅವರು ಮಾಡಿದ ಸೇವೆಯ ಬಗ್ಗೆ ಎಲ್ಲರಿಗೂ ತಿಳಿಯಿತು. ಪುನೀತ್ ರಾಜ್ ಕುಮಾರ್ ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿ. ಅವರ ಹಾದಿಯಲ್ಲಿ ಸಾಗುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ಯುವಕರು ಸಲ್ಲಿಸಬೇಕು ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿ ಹಾಗೂ ವಕೀಲರಾದ ಪೂರ್ಣಿಮಾ ಗುರುಶಾಂತಪ್ಪ ಹೇಳಿದರು.
ಪಟ್ಟಣದ ಸಿ.ಎಂ.ರಸ್ತೆಯಲ್ಲಿರುವ ದಿವಂಗತ ಡಾ.ರಾಜ್ ಕುಮಾರ್ ಪುತ್ಥಳಿ ಬಳಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು ಯಾವುದೇ ಪ್ರಚಾರ ಇಲ್ಲದೆ ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸಿದ್ದರು. ತಮ್ಮ ದುಡಿಮೆಯ ಪಾಲನ್ನು ಸಮಾಜ ಸೇವೆಗೆ ಮೀಸಲಿಡುವ ಮೂಲಕ ಮರಣದ ನಂತರವೂ ಜೀವಂತವಾಗಿದ್ದಾರೆ ಎಂದು ಪುನೀತ್ ಸ್ಮರಿಸಿದರು.
ಪುನೀತ್ ರಾಜಕುಮಾರ್ ಅವರು ನಮ್ಮ ಬಳಿ ಇಲ್ಲ ಎಂಬ ದುಃಖವನ್ನು ನಾವು ಮರೆತು ಅವರು ಇದ್ದಾರೆ ಎಂಬ ಭಾವವನ್ನು ನಮ್ಮಲ್ಲಿ ಬೆಳೆಸಿಕೊಂಡು ನಾ ಅವರ ಹುಟ್ಟು ಹಬ್ಬದ ದಿನ ಇಡೀ ಕರ್ನಾಟಕದಲ್ಲಿ ಸಂಭ್ರಮ ಆಚರಿಸಲಾಗುತ್ತದೆ ಇಂದು ಅವರ 49ನೇಯ ಹುಟ್ಟುಹಬ್ಬದ ದಿನವಾಗಿದೆ.
ಪುನೀತ್ ರಾಜ್ ಕುಮಾರ್ ನಮ್ಮನ್ನು ಬಿಟ್ಟು ಹೋದರು, ಅವರ ಪರಂಪರೆ ಹಾಗೂ ಆದರ್ಶ ಗುಣಗಳು ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಧೈರ್ಯ ನೀಡುತ್ತಲೇ ಇದೆ ಎಂದು ತಿಳಿಸಿದರು.
ಸ್ವಾರ್ಥ ವಿಲ್ಲದ ಜೀವ ನಮ್ಮ ಅಪ್ಪು ಅವರ ಜೀವ ಈ ಜೀವ ಈಗ ನಮ್ಮ ಬಳಿ ಇಲ್ಲ ಆದರೆ ಅವರು ತೋರಿಸಿದ ಮಾರ್ಗ ನಮ್ಮ ಹೃದಯದಲ್ಲಿ ಎಂದಿಗೂ ಇರುತ್ತದೆ ಎಂದರಲ್ಲದೆ ಅಪ್ಪು ಅವರು ಬದುಕಿದ 46 ವರ್ಷಗಳ ಕಾಲ ಅವಧಿಯಲ್ಲಿ ಮನುಷ್ಯ ಹೇಗೆ ಜೀವನದಲ್ಲಿ ಬದುಕಬೇಕು ಎಂಬ ಸುಲಭ ಮಾರ್ಗವನ್ನು ತೋರಿಸಿ ಹೋಗಿದ್ದಾರೆ.
ಅಪ್ಪು ಅವರು ದೇಹದಿಂದ ದೂರವಾಗಿದ್ದಾರೆ ಆದರೆ ಸಾವಿರಾರು ಕೋಟಿ ಅಭಿಮಾನಿಗಳ ಹೃದಯದಲ್ಲಿ ನೆನಪಾಗಿ ಉಳಿದಿದ್ದಾರೆ ಎಂದು ತಿಳಿಸಿದರು.ಇದಕ್ಕೂ ಮೊದಲು ಹುಟ್ಟು ಹಬ್ಬದ ಅಂಗವಾಗಿ ನೂರಾರು ಜನರಿಗೆ ಅನ್ನಸಂತರ್ಪಣೆ ವಿತರಿಸಲಾಯಿತು.
ಈ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಾದ ಭಾಸ್ಕರ್, ರಾಜು ,ಪ್ರವೀಣ, ಅವಿನಾಶ್, ಗಿರೀಶ್, ಪುನಿ, ರಂಗಸ್ವಾಮಿ, ವರುಣ, ವಿನಿ, ಶ್ರೇಯಾ, ವೆಂಕಟೇಶ ಸೇರಿದಂತೆ ಇನ್ನಿತರರು ಹಾಜರಿದ್ದರು.