ನೀತಿ ಸಂಹಿತೆ ಹಿನ್ನೆಲೆ ಪೋಸ್ಟರ್‍ಗಳ ತೆರವು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.18:- ಲೋಕಸಭಾ ಚುನಾವಣೆ ಜಾರಿಯಾದ ಹಿನ್ನೆಲೆಯಲ್ಲಿ ನಗರದಲ್ಲಿ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸಂಬಂಧ ಪಟ್ಟಂತಹ ಪೋಸ್ಟರ್‍ಗಳನ್ನು ನಗರಸಭೆ ವತಿಯಿಂದ ತೆರವುಗೊಳಿಸಲಾಯಿತು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ನಗರದ ಪ್ರಮುಖ ವೃತ್ತಗಳು, ವಾರ್ಡ್‍ನ ಪ್ರಮುಖ ಬೀದಿಗಳ ರಸ್ತೆಯ ಅಕ್ಕ ಪಕ್ಕ ಹಾಕಿರುವ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸಂಬಂಧ ಪಟ್ಟಂತಹ ಪೆÇೀಸ್ಟರ್ ಗಳು, ಗೋಡೆ ಬರಹಗಳು, ಬ್ಯಾನರ್‍ಗಳನ್ನ ತೆರವು ಗೊಳಿಸಲು ಚುನಾವಣಾ ಆಯೋಗವು ಸೂಚಿಸಿರುವುದರಿಂದ ಎಲ್ಲರೂ ಚುನಾವಣೆ ನೀತಿ ಸಂಹಿತೆ ಅದೇಶವನ್ನು ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮಜರುಗಿಸಲಾಗುವುದು ಎಂದು ನಗರಸಭೆ ಪೌರಯುಕ್ತ ರಾಮದಾಸ್ ತಿಳಿಸಿದ್ದಾರೆ.
ಅವರು ಪಟ್ಟಣ ಪ್ರದೇಶದಲ್ಲಿ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂದಿಸಿದ ಪ್ಲೆಕ್ಸ್‍ಗಳು, ಗೋಡೆ ಬರಹಗಳು, ದೊಡ್ಡದೊಡ್ಡ ಹೊಡಿರ್ಂಗ್ಸ್‍ಗಳು, ಪೆÇೀಸ್ಟರ್ ಬ್ಯಾನರ್‍ಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು,
ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಮಂಜುನಾಥ್, ನಾರಾಯಣ್, ಹಾಗೂ ಆರೋಗ್ಯ ಸಿಬ್ಬಂದಿಗಳಾದ ಮಣಿಕಂಠ, ಅರ್ಫಾಜ್ ಅಹ್ಮದ್, ತನ್ವಿರ್, ಮಂಜು, ರಂಗಸ್ವಾಮಿ, ಚೇತನ್, ಸಿ.ಡಿ ವೆಂಕಟೇಶ್ ಹಾಗೂ ಮನೋಹರ ಹಾಜರಿದ್ದರು.