ಡಾ.ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ: ಅನ್ನ ಸಂತರ್ಪಣೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 18- ನಗರದ ನೃಪತುಂಗ ವೃತ್ತದಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರ 49ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ, ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ನಗರದ ನೃಪತುಂಗ ಸರ್ಕಲ್‍ನಲ್ಲಿ ಅಪ್ಪು ಬಾವಚಿತ್ರವಿಟ್ಟು ವಿಶೇಷ ಮಂಟಪವನ್ನು ನಿರ್ಮಾಣ ಮಾಡಿ ಪುಷ್ಪಗಳಿಂದ ಶೃಂಗರಿಸಿ, ಅಪ್ಪು ಪರ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು ಹಾಗೂ ಯುವಕರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುμÁ್ಷರ್ಚನೆ ಮಾಡಿ ಕೇಕ್ ಕತ್ತರಿಸಿ ಅಪ್ಪು ಬಾಸ್‍ಗೆ ಜಯಕಾರ ಕೂಗಿದರು. ನಂತರ ಸಾರ್ವಜನಿಕರಿಗೆ ಮೊಸರನ್ನ, ಭಾತ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಪ್ಪು ಬಳಗದ ಅಧ್ಯಕ್ಷ ಕುಮಾರ್, ಮಂಟೇಸ್ವಾಮಿ, ಕೃಷ್ಣ, ಗಿರೀಶ್, ವೆಂಕಿ, ಯೋಗಿ, ವಿಶ್ವನಾಥ್, ರಾಜಪ್ಪ, ನಟರಾಜು, ಶಂಕರ್, ಕೆಂಪ, ರಾಹುಲ್, ಅಭಿಲಾಷಾ, ನವೀನ್, ಗೇರ್ ಮಂಜು, ಮೊದಲಾದವರು ಇದ್ದರು.