ಅತಿಥಿ ಶಿಕ್ಷಕರಿಂದ ಪ್ರತಿಭಟನೆ
ಇಂಡಿ:ಸೆ.೧೮:ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರಿಗೆ ೪ ತಿಂಗಳ ವೇತನ ನೀಡಿಲ್ಲ, ಅದಲ್ಲದೆ ಪ್ರಸಕ್ತ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಿಗೆ ಗೌರವಧನದ ಜೊತೆಗೆ ವರ್ಷದ ಅಂತ್ಯದ ವರೆಗೂ ಮುಂದುವರೆಸಬೇಕೆAದು ಆಗ್ರಹಿಸಿ ಅತಿಥಿ ಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಒಟ್ಟು ೧೨೨ ಅತಿಥಿ ಶಿಕ್ಷಕರಿದ್ದು ಖಾಯಂ ಶಿಕ್ಷಕರು ಬಂದರೆ ಅತಿಥಿ ಉಪನ್ಯಾಸಕರನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಅದಕ್ಕೆ ಬದಲಾಗಿ ಖಾಲಿ ಇರುವ ಸ್ಥಳಗಳಲ್ಲಿ ಅತಿಥಿ ಶಿಕ್ಷಕರನ್ನು ಸೇವೆಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಕುರಿತು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಶಿಕ್ಷಕರ ತಾಲೂಕಾ ಅಧ್ಯಕ್ಷ ರಾಘವೇಂದ್ರ ಕುಮಸಗಿ, ಎಸ್.ಎಂ.ಬಿರಾದಾರ, ಬಿ.ಎಸ್.ಹೊಸುರ, ಎಮ್.ಎಸ್.ಹೊಸುರ, ಕೆ.ಎ.ಜಹಾಗೀರದಾರ,ಎಸ್.ಜಿ.ತೇಲಿ,ಎಸ್.ಎಂ.ಪೂಜಾರಿ, ಪ್ರವೀಣ ಮನಮಿ,ಆರ್.ಎ.ಜಮಾದಾರ, ಎಫ್. ಎಚ್.ಟೇಲರ ಮತ್ತಿತರಿದ್ದರು.