ಶ್ರೀ ಖಾಸ್ಗತ, ವಿರಕ್ತಶ್ರೀಗಳ ಬಧುಕು ಭಕ್ತರಿಗಾಗಿತ್ತು:ಸಿದ್ದಲಿಂಗಶ್ರೀ
ತಾಳಿಕೋಟೆ:ಸೆ.೧೮: ಶ್ರೀ ಖಾಸ್ಗತ ಮಹಾ ಶಿವಯೋಗಿಗಳು ಮತ್ತು ಲಿಂ.ಶ್ರೀ ವಿರಕ್ತ ಮಹಾಸ್ವಾಮಿಗಳು ಇಡೀ ಜೀವನವನ್ನು ಭಕ್ತೋದ್ದಾರಕ್ಕಾಗಿ ಮಿಸಲಿಟ್ಟು ಸವಿಸಿದಂತಹ ಶಿವಯೋಗಿಗಳಾಗಿದ್ದಾರೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಮಂಗಳವಾರರAದು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ೧೭ ರಿಂದ ೨೨ರ ವರೆಗೆ ಪೂಜ್ಯ ಶ್ರೀ ಖಾಸ್ಗತ ಮಹಾಶಿವಯೋಗಿಗಳ ೧೨೮ನೇ ಹಾಗೂ ಶ್ರೀ ವಿರಕ್ತ ಮಹಾ ಶಿವಯೋಗಿಗಳ ೧೦ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಏರ್ಪಡಿಸಲಾದ ಆದ್ಯಾತ್ಮೀಕ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು ನಡೆಯುವದ ದಾರಿ ಸರಿ ಇಲ್ಲದಿದ್ದರೆ ಬದಲಾಯಿಸಬಹುದು ನುಡಿಯುವ ನಾಲಿಗೆ ಬದಲಾದರೆ ಬದಲಾಯಿಸುವದು ಹೇಗೆ ಮೈಚರ್ಮ ತೊಳೆದುಕೊಂಡರೆ ಪಾಪವು ಪರಿಹಾರವಾಗುವದಿಲ್ಲಾ ಶ್ರೀ ಖಾಸ್ಗತರ ವಿರಕ್ತಶ್ರೀಗಳನ್ನು ಭಕ್ತಿಯಿಂದ ನೆನೆಯುವದರ ಜೊತೆಗೆ ಪೂಜೆಗೈದರೆ ಜೀವನದಲ್ಲಿ ಪಾಪವಿಲ್ಲದ ಸಾರ್ಥಕ ಬಧುಕು ಕಟ್ಟಿಕೊಳ್ಳಬಹುದಾಗಿದೆ ಎಂದ ಅವರು ಬಧುಕಿನಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಆದ್ಯಾತ್ಮೀಕ ಪ್ರವಚನಗಳನ್ನು ಕೇಳಬೇಕು ಶ್ರೀ ಖಾಸ್ಗತರು ನಡೆದಾಡಿದ ಈ ನೆಲ ಇಂದು ಪಾವನ ಕ್ಷೇತ್ರವಾಗಿದೆ ಅವರ ಪುಣ್ಯಸ್ಮರಣೆಯ ಆದ್ಯಾತ್ಮೀಕ ಪ್ರವಚನ ಭಕ್ತೋದ್ದಾರದ ಬಾಗಿಲು ಆಗಿದ್ದು ಭಕ್ತಾಧಿಗಳು ನಿತ್ಯ ಆದ್ಯತ್ಮೀಕ ಪ್ರವಚನವನ್ನು ಆಲಿಸಿ ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದರು.
ಇನ್ನೋರ್ವ ಪುರಾಣ ಪ್ರವಚನಕಾರರಾದ ಪ್ರವಚನ ರತ್ನ ಕಲ್ಬುರ್ಗಿ ಜಿಲ್ಲೆಯ ಸುಂಟನೂರ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತಿçÃಗಳು ಮಾತನಾಡಿ ಬಹಿರಂಗದ ಕೊಳೆಯನ್ನು ತೊಳೆದುಕೊಳ್ಳಲು ಸಾಮಗ್ರಿಗಳು ಬಹಳಷ್ಟಿವೆ ಅಂತರAಗದ ಕೊಳೆಯನ್ನು ತೊಳೆದು ಕೊಳ್ಳುಲು ಶ್ರೀ ಖಾಸ್ಗತರಂತಹ ಮಹಾ ಶಿವಯೋಗಿಗಳ ಪುಣ್ಯಸ್ಮರಣೋತ್ಸವದಲ್ಲಿ ಪಾಲ್ಗೊಂಡು ಆದ್ಯಾತ್ಮದ ಸವಿಯನ್ನು ಸವಿದಾಗ ಮಾತ್ರ ಜೀವನವು ಸಾರ್ಥಕವಾಗಲಿದೆ ಮಹಾ ಶಿವಯೋಗಿಗಳು ತಮಗಾಗಿ ಬಧುಕಿದವರಲ್ಲಾ ಸಮಾಜಕ್ಕಾಗಿ ಭಕ್ತರಿಗಾಗಿ ಬಧುಕಿದವರಾಗಿದ್ದಾರೆ ಹೀಗಾಗಿ ಅವರ ಪುಣ್ಯಸ್ಮರಣೀತ್ಸವವನ್ನು ಆಚರಿಸಲಾಗುತ್ತಿದ್ದು ಶ್ರೀ ಖಾಸ್ಗತ ಶಿವಯೋಗಿಗಳು ಬಧುಕಿ ಏಷ್ಟೋ ವರ್ಷಗಳಾದರೂ ಕೂಡಾ ಅವರನ್ನು ಇಂದು ನೆನೆಯಲಾಗುತ್ತಿದೆ ಯಾಕೆಂದರೆ ಅವರನ್ನು ಜ್ಞಾನಿಗಳೆಂದು ಕರೆಯಲಾಗುತ್ತಿದೆ ಸಮಾಜಕ್ಕಾಗಿ ಗಳಿಸಿದವರನ್ನು ಯಾರೂ ನೆನೆಸುವದಿಲ್ಲಾ ಸಮಾಜಕ್ಕಾಗಿ ಬಳಿಸಿದವರನ್ನೂ ನೆನೆಸಲಾಗುತ್ತದೆ ಶ್ರೀ ಖಾಸ್ಗತ ಮಹಾ ಶಿವಯೋಗಿಗಳು ಮತ್ತು ವಿರಕ್ತಶ್ರೀಗಳು ಸಮಾಜಕ್ಕಾಗಿ ಬಳಿಸಿದವರಾಗಿದ್ದಾರೆ ಹೀಗಾಗಿ ಇಂದು ಅವರನ್ನು ನೆನೆಸುವಂತಹ ಕಾರ್ಯ ನಾಡಿನ ತುಂಬೆಲ್ಲಾ ನಡೆಯುತ್ತಿದೆ ಶ್ರೀ ಖಾಸ್ಗತ ಮಠದಲ್ಲಿ ಪ್ರಾರಂಭಗೊAಡಿರುವ ಆದ್ಯಾತ್ಮೀಕ ಪ್ರವಚನವು ೫ ದಿನಗಳ ಕಾಲ ನಡೆಯಲಿದ್ದು ಭಕ್ತರು ಪಾಲ್ಗೊಂಡು ಶ್ರೀ ಖಾಸ್ಗತರ ವಿರಕ್ತಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.