ವೆಂಕಟರೆಡ್ಡಿಗೌಡ ಮುದ್ನಾಳ ನಿಧನಕ್ಕೆ ವಿದ್ಯಾ ವರ್ಧಕ ಸಂಘದಿAದ ಸಂತಾಪ
ಸೈದಾಪುರ:ಸೆ.೧೮:ಯಾದಗಿರಿಯ ಮಾಜಿ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ನಿಧನಕ್ಕೆ ಸೈದಾಪುರ ವಿದ್ಯಾ ವರ್ಧಕ ಸಂಘದಿAದ ಸಂತಾಪ ಸೂಚಿಸಿದ್ದಾರೆ.
ನಮ್ಮ ಸಂಸ್ಥೆಯ ಹಿರಿಯ ಸದಸ್ಯರಾದ ವೆಂಟಕರೆಡ್ಡಿಗೌಡ ಮುದ್ನಾಳ ಅವರು ನೇರ, ನಡೆ, ನುಡಿಯ ವ್ಯಕ್ತಿತ್ವ ಹೊಂದಿದ್ದರು. ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಸಂಸ್ಥೆಯ ಬಗಗೆ ಅಭಿಮಾನ ಹೊಂದಿರುವ ಅವರ ನಿಧನದಿಂದ ಉತ್ತಮ ಸೇವಾ ಮನೋಭಾವನೆಯ ಸಮಾಜ ಸೇವಕರು ಹಾಗೂ ಶಿಕ್ಷಣ ಪ್ರೇಮಿಯನ್ನು ನಾವು ಕಳೆದು ಕೊಂಡAತಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಕುಟಂಬ ವರ್ಗಕ್ಕೆ ದುಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಉಪಾಧ್ಯಕ್ಷ ಲಕ್ಷಿö್ಮÃಕಾಂತರೆಡ್ಡಿ ಪಲ್ಲಾ, ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಬೂದೆಪ್ಪಗೌಡ ಪಾಟೀಲ, ಚಂದ್ರಾಯಗೌಡ ಐರಡ್ಡಿ, ಸಂಗರೆಡ್ಡಿಗೌಡ ಪೋ.ಪಾ.ಮಲ್ಹಾರ, ಶರಣಪ್ಪಗೌಡ ಕೌಳೂರ, ಸಿದ್ರಾಮಪ್ಪಗೌಡ ಗೊಂದೆಡಗಿ, ಚೆನ್ನಾರಡ್ಡಿ ಹುಣಸೇಮರ, ಸೂರ್ಯಪ್ರಕಾಶ ಆನಂಪಲ್ಲಿ, ಪ್ರಭುಲಿಂಗ ವಾರದ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಸಬಸಯ್ಯ ದಂಡಿಗಿಮಠ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಪ್ರಾರ್ಥಸಿದ್ದಾರೆ.