ತಾಲೂಕಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ೬೨ನೇ ವಾರ್ಷಿಕ ಮಹಾಸಭೆ
ಬಸವನಬಾಗೇವಾಡಿ:ಸೆ.೧೮: ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ರೈತರ ಅಭಿವೃದ್ದಿಗಾಗಿ ನಮ್ಮ ಬ್ಯಾಂಕ್ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಬಸವನಬಾಗೇವಾಡಿ ತಾಲೂಕಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಬಸವನಬಾಗೇವಾಡಿ ತಾಲೂಕಾ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ಮೇಲ್ಮಹಡಿಯ ಆವರಣದಲ್ಲಿ ಮಂಗಳವಾರ ಜರುಗಿದ ೬೨ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆಲ ಸಂಧರ್ಭದಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ಪರದಾಡುತ್ತಿರುತ್ತಾರೆ ಮತ್ತು ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ ಅಂತಹ ಸಂಧರ್ಭದಲಲಿ ನಮ್ಮ ಬ್ಯಾಂಕ್‌ನಿAದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ರೈತರ ಕಷ್ಟಕ್ಕೆ ನೆರವಾಗುತ್ತಿದೆ, ನಮ್ಮ ಬ್ಯಾಂಕ್‌ನಿAದ ಕಳೆದ ಮೂರು ವರ್ಷಗಳಿಂದ ಭೂ ಅಭಿವೃದ್ದಿ, ದ್ರಾಕ್ಷಿ, ಎಲೆಬಳ್ಳಿ, ಟ್ಯಾಕ್ಟರ್ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತ ಬಂದಿದ್ದು ರೈತರು ಸಕಾಲಕ್ಕೆ ಸಾಲವನ್ನು ಮರು ಪಾವತಿಸುವ ಮೂಲಕ ಬ್ಯಾಂಕ್‌ನ ಅಭಿವೃದ್ದಿಗೆ ಶ್ರಮಿಸುವ ಮೂಲಕ ಹೆಚ್ಚಿನ ಸಾಲವನ್ನು ಪಡೆಯಬೇಕು ಎಂದರು.
ಪ್ರಸ್ತುತ ವರ್ಷದಲ್ಲಿ ನಮ್ಮ ಬ್ಯಾಂಕ್ ೮೧,೧೪ ಪ್ರತಿಷತ ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ೧೦೧,೪೧ ಲಕ್ಷ ರೂ, ಲಾಭ ಗಳಿಸಿದೆ, ಹಾಗೂ ಬ್ಯಾಂಕ್ ಹೆಚ್ಚಿನ ವಸೂಲಾತಿ ಗುರಿ ಸಾಧಿಸುವ ಮೂಲಕ ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದೆ ಎಂದು ಹೇಳಿದರು.
ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ ರೈತರು ಕೃಷಿ ಚಟುವಟಿಕೆಯೊಂದಿಗೆ ಕುರಿ ಆಕಾಣೆ, ಎಮ್ಮೆ ಸಾಕಾಣೆ ಹೈನುಗಾರಿಕೆಯಂತಹ ಕೃಷಿಯೇತರ ಚಟುವಟಿಕೆ ಮಾಡುವಂತಾಗಬೇಕು ಅದರೊಂದಿಗೆ ಮಿಶ್ರ ಬೆಳೆ ಬೆಳೆಯಬೇಕು ಅಂದಾಗ ರೈತನ ಬದುಕು ಹಸನಾಗಲು ಸಾಧ್ಯ, ಸರ್ಕಾರದಿಂದ ಹೈನುಗಾರಿಕೆಗೆ ವಿಶೇಷವಾಗಿ ಸಾಲ ಸೌಲಭ್ಯ ಕಲ್ಪಿಸುತ್ತದೆ, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಬಿ,ಎಸ್ ಪೂಜಾರಿ, ಬ್ಯಾಂಕ್ ನಿರ್ದೇಶಕರಾದ ಎನ್,ಪಿ ಬಿಸನಾಳ, ವ್ಹಿ,ಎಸ್ ನಾಡಗೌಡ, ಆರ್ ವಾಯ್ ಬಾವೂರ, ಎಂ,ಬಿ ಪಾಟೀಲ, ಎಸ್,ಎಸ್ ಎಮ್ಮಿ, ಶ್ರಿಮತಿ ಯು,ಜಿ ವಿವೇಕಿ, ಎ,ಎ, ಬಿರಾದಾರ, ಜಿ,ಬಿ ಕೊಲ್ಹಾರ, ಆರ್,ಬಿ ಪಾಟೀಲ, ಮುಖಂಡರಾದ ಲೋಕನಾಥ ಅಗರವಾಲ, ಬಾಲಚಂದ್ರ ಮುಂಜಾನೆ, ವೇದಿಕೆಯಲ್ಲಿದ್ದರು, ಬ್ಯಾಂಕ್ ನಿರ್ದೇಶಕ ರವಿ ರಾಠೋಡ ಸ್ವಾಗತಿಸಿದರು, ಬ್ಯಾಂಕ್ ವ್ಯವಸ್ಥಾಪಕ ಎಸ್,ಬಿ, ಮಂತ್ರಿ, ಹಣಮಂತ ಜಾಲಗೇರಿ ನಿರೂಪಿಸಿ ವಂದಿಸಿದರು.