ಕ.ಕ ವಿಮೋಚನೆಗಾಗಿ ಹೋರಾಡಿದವರನ್ನು ಸ್ಮರಿಸೋಣ
ಭಾಲ್ಕಿ: ಸೆ.೧೮:ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ ಎಂದು ಸಾಹಿತಿ ಡಾ| ಕಾಶಿನಾಥ ಚಲವಾ ಅಭಿಪ್ರಾಯಪಟ್ಟರು.
ಪಟ್ಟಣದ ಪುರಭವನದಲ್ಲಿ ಮಂಗಳವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಜಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು, ಇಂದಿನ ಕಲ್ಯಾಣ ಕರ್ನಾಟಕ, ಅಂದಿನ ಹೈದ್ರಾಬಾದ ಕರ್ನಾಟಕವಾಗಿತ್ತು. ಸ್ವಾತಂತ್ರಾö್ಯನAತರವೂ ಒಂದು ವರ್ಷಕಾಲ ನಿಜಾಮನ ಆಡಳಿತದಲ್ಲಿದ್ದ ಹೈ.ಕ. ಭಾಗವನ್ನು ಸರ್ದಾರ ವಲ್ಲಭಭಾಯಿ ಪಟೇಲರ ಮುಂದಾಳತ್ವದಲ್ಲಿ ಪೊಲೀಸ್ ಆಕ್ಷನ್ ಮೂಲಕ ಸ್ವತಂತ್ರ ಭಾರತದಲ್ಲಿ ವಿಲೀನ ಗೊಳಿಸಲಾಯಿತು. ಈ ಒಂದು ವರ್ಷದಲ್ಲಿ ನಡೆದ ಘಟನೆಗಳಲ್ಲಿ, ಸ್ವತಂತ್ರಕ್ಕಾಗಿ ಹೋರಾಡಿದ ನಮ್ಮ ಭಾಗದ ಮಹನೀಯರನ್ನು ನಾವು ಸ್ಮರಿಸಬೇಕಾದ ಕ್ಷಣ ಇದಾಗಿದೆ ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇವೇಳೆ ವಿಶ್ವಕರ್ಮ ದಿನಾಚರಣೆ ನಿಮಿತ್ಯ ಡಾ| ಇಂದ್ರಜೀತ ಪಾಂಚಾಳ ರವರಿಂದ ವಿಶೇಷ ಉಪನ್ಯಾಸ ಮಂಡಿಸಲಾಯಿತು. ಸ್ವಾತಂತ್ರಯೋಧರ ಕುಟುಂಬಸ್ಥರು ಮತ್ತು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದ ತಾಲೂಕು ನೌಕರರಿಗೆ ತಾಲೂಕು ಆಡಳಿತದವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸ್ವಾತಂತ್ರಯೋಧ ರಾಮರಾವ ಕುಲಕರ್ಣಿ, ಹೀರಾಚಂದ ವಾಘಮಾರೆ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದನಕೇರೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಗ್ರೇಡ್೨ ತಹಸೀಲ್ದಾರ ಪಲ್ಲವಿ ಬೆಳಕೆರೆ, ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ವಡ್ಡನಕೇರಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷಿö್ಮ.ಬಿ ವಂದಿಸಿದರು.