ಹೈದರಾಬಾದ್ ಕರ್ನಾಟಕ ವಿಮೋಚನೆಗೆ ರೋಚಕ ಇತಿಹಾಸವಿದೆ: ಹಿರೇಮಠ
ಚಿತ್ತಾಪುರ: ಸೆ.೧೮:ಭಾರತ ದೇಶಕ್ಕೆ ೧೫ ಆಗಸ್ಟ್ ೧೯೪೭ ರಲ್ಲಿ ಸ್ವಾತಂತ್ರ‍್ಯ ಸಿಕ್ಕರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಒಂದು ವರ್ಷ ತಡವಾಗಿ ಅಂದರೆ ೧೭ ಸೆಪ್ಟೆಂಬರ್ ೧೯೪೮ ರಂದು ಸ್ವಾತಂತ್ರ‍್ಯ ದೊರೆಯಿತು. ಹೀಗಾಗಿ ಹೈದರಾಬಾದ್ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಹಶೀಲ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದಿಟ್ಟ ನಿರ್ಧಾರದಿಂದ ಆಪರೇಷನ್ ಪೋಲೊ ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್ ಕರ್ನಾಟಕ ವಿಮೋಚನೆ ಗೊಂಡಿತ್ತು ಇದೊಂದು ರೋಚಕ ಇತಿಹಾಸವಾಗಿದೆ, ಇದರ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಶಿಕ್ಷಣದಿಂದಲೇ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಈ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ ೩೭೧ಜೆ ತಿದ್ದುಪಡಿ ಮಾಡುವಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ, ಧರಂಸಿAಗ್ ಹಾಗೂ ವೈಜನಾಥ ಪಾಟೀಲ ಅವರು ಪ್ರಮುಖರು ಎಂದು ಸ್ಮರಿಸಿದ ಅವರು, ಈ ತಿದ್ದುಪಡಿಯಿಂದ ಈ ಭಾಗದಿಂದ ಅನೇಕರು ಕೆಎಎಸ್, ಪಿಎಸ್‌ಐ ಸೇರಿದಂತೆ ಇತರೆ ಹುದ್ದೆಗಳು, ವಿದ್ಯಾರ್ಥಿಗಳಿಗೆ ಇಂಜಿನಿಯರಿAಗ್, ಮೇಡಿಕಲ್ ಸೇರಿದಂತೆ ಇನ್ನಿತರ ಸೀಟುಗಳು ಪಡೆಯಲು ಸಾಧ್ಯವಾಗಿದೆ ಎಂದರು.
೩೭೧ಜೆ ಜಾರಿಗೆ ಬಂದು ಹತ್ತು ವರ್ಷಗಳು ಆಗಿದೆ ಹೀಗಾಗಿ ಜಿಲ್ಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಮೀಟಿಂಗ್ ಮಾಡಿ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಲಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ ಆಗುತ್ತಿದೆ. ಹೀಗಾಗಿ ೩೭೧ಜೆ ಲೋಪದೋಷಗಳನ್ನು ಸರಿಪಡಿಸಿ ತಿದ್ದುಪಡಿ ಮಾಡಿ ಈ ಭಾಗದ ಸರ್ಕಾರಿ ನೌಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಗೌರವ ಸನ್ಮಾನ: ತಾಲೂಕಿನ ಸರ್ಕಾರಿ ನೌಕರರ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರರಾದ ಸಿಡಿಪಿಒ ಇಲಾಖೆಯ ಗೀತಾ ಯಡ್ರಾಮಿ, ಆಶಾ ಕಾರ್ಯಕರ್ತೆ ವಿಜುಬಾಯಿ, ಬಿಇಒ ಕಚೇರಿಯ ಮಲ್ಲಯ್ಯ, ಪಿಡಬ್ಲ್ಯುಡಿ ಇಲಾಖೆಯ ಮಹ್ಮದ್ ಮೋಸಿನ್ ಈ ನಾಲ್ಕು ಜನ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಲಾದ ವಿಶ್ವಕರ್ಮ, ವಿಶ್ವರಾಜ ಇನಾಂದಾರ್ ದಿಗ್ಗಾಂವ ಮಾತನಾಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಆಕ್ರಂ ಪಾಷಾ, ಬಿಇಒ ಶಶಿಧರ ಬಿರಾದಾರ, ಜಿಪಂ ಎಇಇ ಬಾಲಕೃಷ್ಣ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಪಿಎಸ್‌ಐ ಚಂದ್ರಾಮಪ್ಪ, ಎಪಿಎಂಸಿ ಕಾರ್ಯದರ್ಶಿ ಸವೀತಾ ಗೋಣಿ, ಬಿಆರ್ ಸಿ ಮಲ್ಲಿಕಾರ್ಜುನ ಸೇಡಂ, ಶಿರಸ್ತೇದಾರ್ ಅಶ್ವಥನಾರಾಯಣ, ಮೈನೋದ್ದಿನ್ ಸೇರಿದಂತೆ ಇತರರು ಇದ್ದರು. ಸಂತೋಷ ಶಿರನಾಳ್ ನಿರೂಪಿಸಿ ವಂದಿಸಿದರು.
ಚಿತ್ರ;೧೭ಸಿಟಿಪಿಆರ್೧
ಚಿತ್ತಾಪುರ; ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಉದ್ಘಾಟಿಸಿದರು.
ವಿಶ್ವಕರ್ಮ ಸಮಾಜದವರಿಂದ ಆಕ್ರೋಶ:
ವೇದಿಕೆಯ ಮೇಲೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬ್ಯಾನರ್ ಹಾಕಿದ್ದೀರಿ ವಿಶ್ವಕರ್ಮ ಜಯಂತಿ ಬ್ಯಾನರ್ ಏಕೆ ಹಾಕಿಲ್ಲ ಮತ್ತು ವಿಶ್ವಕರ್ಮ ಅವರ ಭಾವಚಿತ್ರ ಏಕೆ ಇಟ್ಟಿಲ್ಲ ಹಾಗೂ ಆಮಂತ್ರಣ ಪತ್ರಿಕೆ ಮುದ್ರಿಸಿಲ್ಲ, ನಮ್ಮ ಸಮಾಜಕ್ಕೆ ಮಲತಾಯಿ ಧೋರಣೆ ಮಾಡಿದ್ದೀರಿ ಎಂದು ಸಮಾಜದ
ಮುಖಂಡರಾದ ರವಿ ಪಂಚಾಳ, ಶಂಭು ಕರದಾಳ ಅವರ ಭಾವಚಿತ್ರ ಏಕೆ ಇಟ್ಟಿಲ್ಲ ಹಾಗೂ ಆಮಂತ್ರಣ ಪತ್ರಿಕೆ ಮುದ್ರಿಸಿಲ್ಲ, ನಮ್ಮ ಸಮಾಜಕ್ಕೆ ಮಲತಾಯಿ ಧೋರಣೆ ಮಾಡಿದ್ದೀರಿ ಎಂದು ಸಮಾಜದ ಮುಖಂಡರಾದ ರವಿ ಪಂಚಾಳ, ಶಂಭು ಕರದಾಳ ಇತರರು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.