ಪೂಜೆ, ಧ್ಯಾನದಿಂದ ಕಲುಷಿತ ಮನಸ್ಸು ಶುದ್ದ : ನೌಬಾದೆ
ಸಂಜೆವಾಣಿ ವಾರ್ತೆ
ಔರಾದ : ಮಾ.18:ಮನುಷ್ಯನ ಮನಸ್ಸನ್ನು ಪರಿವರ್ತನೆಗೊಳಿಸುವುದು ಹಾಗೂ ಕಲುಷಿತ ಮನಸ್ಸನ್ನು ಪರಿಶುದ್ಧಗೊಳಿಸುವ ಪ್ರಮುಖ ಅಸ್ತ್ರವೇ ಪೂಜೆ ಮತ್ತು ಧ್ಯಾನ ಎಂದು ಬಸವೇಶ್ವರ ಡಿ.ಎಲ್.ಇಡಿ ಕಾಲೇಜು ಪ್ರಾಚಾರ್ಯ ಶರಣಪ್ಪ ನೌಬಾದೆ ಅಭಿಪ್ರಾಯಪಟ್ಟರು.
ಪಟ್ಟಣದ ಬಸವ ಗುರುಕುಲ ಸಮೂಹದ ಬಸವೇಶ್ವರ ಡಿ.ಎಲ್.ಇಡಿ ಕಾಲೇಜಿನಲ್ಲಿ ನಡೆದ ವಾರದ ಬಸವ ಪೂಜಾ ಕಾರ್ಯಕ್ರಮ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಧ್ಯಾನ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೊರತೆಗೆಯಲು ದ್ಯಾನದಿಂದ ಮಾತ್ರ ಸಾಧ್ಯ, ಮನಸ್ಸಿನಲ್ಲಿ ತುಂಬಿಕೊಂಡಿರುವ ಲೋಭ, ಮೋಹ, ದ್ವೇಷ ಎಂಬ ಕಲ್ಮಶವನ್ನು ಪೂಜೆ ಮತ್ತು ಧ್ಯಾನದ ಮೂಲಕ ಹೊರತೆಗೆಯಬೇಕಿದೆ ಎಂದರು.
ಬಸವ ಗುರುಕುಲ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ನಿರ್ಮಲಾ ಸೇರಿ ಅವರು ಮಾತನಾಡಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳೆ ಮುಂದಿನ ಭಾವಿ ಶಿಕ್ಷಕರು. ಮಕ್ಕಳ ಭವ್ಯ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಟಿಐ ಕಾಲೇಜು ಪ್ರಾಚಾರ್ಯ ಸತೀಶ್ ಗಂದಿಗುಡೆ, ಮುಖ್ಯ ಶಿಕ್ಷಕಿ ಇಂದುಮತಿ ಏಡವೆ, ಸಂಜೀವಕುಮಾರ ವಲಾಂಡೆ, ನಾಗನಾಥ ಶಂಕು ಬಸವರಾಜ ತಳವಾರ, ವಾಮಾನರಾವ ಮಾನೆ, ರೇಖಾ ನೌಬಾದೆ, ರಮೇಶ ಕುಟಮುಲಗೆ, ಸಂದೀಪ ಫುಲೇ,ಸಂಗೀತಾ ಪಾಟೀಲ್, ಸುಮಲತಾ ಎಚ್.ಎಂ, ಬಾಲಾಜಿ ನಿಟ್ಟೂರೆ, ಬಸವರಾಜ ಚೈನಾಪುರೆ, ನಾಗೇಶ್ವರಿ ಡೋಂಗ್ರೆ, ಸುಜಾತಾ ಮೂಳೆ, ಹಣಮಂತರಾವ ಕೋಳಿ, ಅಮರ್ ದ್ಯಾಡೆ, ಲಕ್ಶ್ಮಣ ಯರನಾಳೆ, ಶೇಕ್ ಸಲೀಮ್, ಅಮರ ನಿಶ್ಪತೆ, ಜಗದೀಶ ಗೌಡ, ಪಲ್ಲವಿ ಮೇತ್ರೆ, ಪ್ರೀತಿ ಸ್ವಾಮಿ, ಸಂತೋಷಿ ಸಿರಮೇವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು