ಆರೋಗ್ಯಕರ ಜೀವನಕ್ಕೆ ಬಾಯಿ-ದಂತ ಆರೋಗ್ಯ ತುಂಬಾನೆ‌ ಮುಖ್ಯ:ಡಾ. ಶರಣಬಸಪ್ಪ ಗಣಜಲಖೇಡ್
ಕಲಬುರಗಿ:ಮಾ.17: ಮಕ್ಕಳಿಂದ‌ ಹಿಡಿದು ವಯೋವೃದ್ಧರ ವರೆಗೆ ಪ್ರತೊತೊಬ್ಬರು ಆರೋಗ್ಯರ ಜೀವನ‌ ನಡೆಸಬೇಕಾದಲ್ಲಿ ಬಾಯಿ ಮತ್ತು ದಂತ ಅರೋಗ್ಯ ಉತ್ತಮವಾಗಿ ಹೊಂದುವುದು ಅವಶ್ಯಕ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿಯ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ್ ಹೇಳಿದರು.
ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಎನ್.ಓ.ಹೆಚ್.ಪಿ. ಕಾರ್ಯಕ್ರಮ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲ ಮಂದಿರ ಕಲಬುರಗಿ ಇವರ ಸಂಯುಕ್ತಶ್ರಾಯದಲ್ಲಿ ನಗರದ ಆಳಮದ ಕಾಲೋನಿಯಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಿದ ವಿಶ್ವ ಬಾಯಿ ಆರೋಗ್ಯ ದಿನ ಮತ್ತು ಬಾಯಿ ಅರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಯಿ ಮತ್ತು ದಂತ ಸುರಕ್ಷಿತವಾಗಿ ಇಟ್ಟುಕೊಳ್ಳದಿದ್ದರೆ ನಮ್ಮ ಆರೋಗ್ಯ ಹದಗೆಡುತ್ತದೆ. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ. ಬಾಯಿ ಆರೋಗ್ಯಕ್ಕೆ ಎಷ್ಟು ಮಹತ್ವ ನೀಡುತ್ತಿವೋ ಅಷ್ಟೇ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. “ಹೆಲ್ದಿ ಮೌತ್ ಹೆಲ್ದಿ ಬಾಡಿ” ಪೋಷವಾಕ್ಯವಾಗಿ ಊಟ, ಉಸಿರಾಟ, ಮಾತನಾಡುವ ಕಾರ್ಯಗಳು ಚೆನ್ನಾಗಿದಲ್ಲಿ ಮಾತ್ರ ಆರೋಗ್ಯವಮತರಾಗಲು ಸಾಧ್ಯ ಎಂದರು.
ಆರೋಗ್ಯ ಇಲಾಖೆ ಕಳೆದ ಹತ್ತೆನ್ನೆರಡು ವರ್ಷಗಳಿಂದ ವಿಶ್ವ ಬಾಯಿ ಆರೋಗ್ಯ ಮತ್ತು ದಂತ ಚಿಕಿತ್ಸಾ ಕಾರ್ಯಕ್ರಮದ‌ ಮೂಲಕ ಬಾಯಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ.‌ ನಿರಂತರ ತಪಾಸಣಾ ಶಿಬಿರ ಸಹ ಆಯೋಜಿಸುತ್ತಾ ಬಂದಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದ್ದು, ಪ್ರತಿಯೊಬ್ಬರಿ ತಮ್ಮ ಕುಟುಮಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳಿಗೂ ಈ ಬಗ್ಗೆ ತಿಳಿಹೇಳಬೇಕೆಂದರು.
ಇದಕ್ಕೂ‌ ಮುನ್ನ ಜಿಲ್ಲಾ ಎನ್.ಓ.ಹೆಚ್.ಪಿ ಕಾರ್ಯಕ್ರಮಾಧಿಕಾರಿ ಡಾ. ಸಂಧ್ಯಾ ಡಾಂಗೆ ಅವರು ವಿಶ್ವ ಬಾಯಿ ಆರೋಗ್ಯ ಮತ್ತು ದಂತ ಶಿಬಿರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಟೂತ್ ಪೇಸ್ಟ್,ಬ್ರಶ್ ವಿತರಣೆ:
ಕಾರ್ಯಕ್ರಮ ಅಂಗವಾಗಿ ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆಯಿಂದ ಬಾಲಕಿಯರ ಬಾಲ ಮಂದಿರದ ಮಕ್ಕಳಿಗೆ ಉಚಿತ ದಂತ ತಪಾಸಣೆ ಮಾಡುವುದರ ಜೊತೆಗೆ ಟೂತ್ ಪೇಸ್ಟ್ ಮತ್ತು ಬ್ರಷ್ ವಿತರಣೆ ಮಾಡಲಾಯಿತು. ಇದಲ್ಲದೆ ಬಾಯಿ ಮತ್ತು ದಂತ ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗೋಣ ಎಂದು ಮಕ್ಕಳಿಗೆ ಪ್ರತಿಜ್ಞೆ ಬೋಧಿಸಲಾಯಿತು.
ಡಿ.ಹೆಚ್.ಓ. ಡಾ. ರತಿಕಾಂತ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್.ಸಿ ಹೆಚ್. ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರವಿಕಾಂತಿ ಕ್ಯಾತನಾಳ, ಕಲಬುರಗಿ ಇ.ಎಸ್.ಐ.ಸಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಪಾಟೀಲ್ ಜೇವರ್ಗಿ, ಸೇಡಂ ಟಿ.ಎಚ್.ಓ ಡಾ. ಸಿದ್ದು ಪಾಟೀಲ್, ಡಾ. ಸಂಜು ಪಾಟೀಲ್, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶಾಂತಾಬಾಯಿ ಮಾಲೆ ಸೇರಿದಂತೆ ಜಿಲ್ಲೆಯ ದಂತ ಆರೋಗ್ಯ ಅಧಿಕಾರಿಗಳು ಹಾಗೂ ಬಾಲ ಮಂದಿರದ ಆಡಳಿತ ಮಂಡಳಿ ಸದಸ್ಯರು, ಮಕ್ಕಳು ಇದ್ದರು. ದಂತ ಆರೋಗ್ಯ ಅಧಿಕಾರಿ ಡಾ. ವಿಶ್ವನಾಥ ಪ್ರಾರ್ಥನಾ ಗೀತೆ ಹಾಡಿದರು. ಡಾ. ಶ್ವೇತಾ ದೇವದುರ್ಗ ನಿರೂಪಿಸಿದರು. ಡಾ. ಶ್ವೇತಾ ರಾಜಗೀರಿ ಅವರು ಸ್ವಾಗತಿಸಿದರೆ, ಡಾ. ದೀಪಾ ವಂದಿಸಿದರು.