ಸಂವಿಧಾನ ಬದಲಾವಣೆ ಕುರಿತು ಅನಂತ ಕುಮಾರ್ ಹೆಗ್ಡೆ ಹೇಳಿಕೆಗೆ ದಲಿತ ಸೇನೆ ಖಂಡನೆ
ಸೇಡಂ, ಮಾ, 17: ಸಂಸದ ಅನಂತ ಕುಮಾರ್ ಹೆಗ್ಡೆ ಅರೆ ಹುಚ್ಚನಂತೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ” ಎಂಬ ಸಂವಿಧಾನ ವಿರೋಧಿ ಹೇಳಿಕೆಯನ್ನು ಕೊಟ್ಟಿದ್ದು ಕೂಡಲೇ ಈ ಸಂಸದರ ಮೇಲೆ ದೇಶ ದ್ರೋಹ ಪ್ರಕರಣವನ್ನು ದಾಖಲಿಸಿ ಜೈಲಿಗೆ ತಳ್ಳಬೇಕೆಂದು ಮಳಖೇಡ ದಲಿತ ಸೇನೆ ವಲಯ ಅಧ್ಯಕ್ಷರಾದ ಭಗವಾನ್ ಬೋಚಿನ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ನಾಲಿಗೆಯನ್ನ ಹರಿಬೀಡುತ್ತಿರುವ ಅನಂತ ಕುಮಾರ ಹೆಗಡೆ ಯನ್ನು ಚಪ್ಪಲಿಯಿಂದ ಹೊಡೆದು ಓಡಿಸಬೇಕು ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ ಅದರ ಬಗ್ಗೆ ಮಾತನಾಡುವುದು ಬಿಟ್ಟು ಸಂವಿಧಾನಕ್ಕೆ ದಕ್ಕೆ ಬರುವಂತೆ ನಡೆದುಕೊಂಡರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.