ಬಿಎಸ್‍ಎನ್‍ಎಲ್‍ಗೆ ನಾಮನಿರ್ದೇಶನ
ಕಲಬುರಗಿ,ಮಾ.17: ಭಾರತ ಸಂಚಾರ ನಿಗಮ ನಿಯಮಿತದ ಕಲಬುರಗಿ ವೃತ್ತ ಕಚೇರಿಯ ಸಲಹಾ ಸಮಿತಿಯ ಸದಸ್ಯರಾಗಿ (ಟಿಎಸಿ) ಕಲಬುರಗಿಯ ಸಂತೋಷ ತಂದೆ ಹಣಮಂತ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಮುಂದಿನ ಆದೇಶ ಬರುವವರೆಗೂ ಆಡಳಿತ ಮಂಡಳಿಗೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಭಾರತ ಸರಕಾರದ ಸಂಚಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.