ತೇಂಗಳಿಯಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ
ಕಲಬುರಗಿ,ಮಾ.17: ಕಾಳಗಿ ತಾಲೂಕಿನ ತೇಂಗಳಿ ಶಾಂತೇಶ್ವರ ಹಿರೇಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮಾ. 11 ರಿಂದ ಆರಂಭವಾದ ಗದುಗಿನ ಪಂಚಾಕ್ಷರಿ ಗವಾಯಿಗಳವರ ಪುರಾಣ ಪ್ರವಚನ ಮಾ.22 ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ವೀರೇಶ ಶಾಸ್ತ್ರೀಗಳು ಮಲಕೂಡ ಅವರಿಂದ ನಡೆಯಲಿದೆ.ಡಾ. ಶಾಂತಸೋಮನಾಥ ಶಿವಾಚಾರ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.ಮಾ.21 ರಂದು ಬೆಳಿಗ್ಗೆ 6 ಗಂಟೆಗೆ ಜನಜಾಗೃತಿ ಪಾದಯಾತ್ರೆ ನಡೆಯಲಿದೆ.ಮಾ.22 ರಂದು ಬೆಳಿಗ್ಗೆ 6 ಗಂಟೆಗೆ ಪಲ್ಲಕ್ಕಿ ಉತ್ಸವ ಸಹಿತ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಕಳಸ ಮಂಗಲವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು.ಮಾ. 22 ರಂದು ಬೆಳಿಗ್ಗೆ 8 ಗಂಟೆಗೆ ಏಳೂರ ಸೀಮೆಯ ತಾಯಿ ದುರ್ಗಾದೇವಿ ಸ್ಮರಣೆ, ತಾಯಿಯಂದಿರಿಗೆ ಉಡಿತುಂಬುವ ಸಮಾರಂಭ ನಡೆಯಲಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಸಮಿತಿ ಮತ್ತು ಕಲಬುರಗಿ ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬುಲಗೆ ತಿಳಿಸಿದ್ದಾರೆ.