ವಿಶ್ವದ ಅರಿವು ಉಳಿವಿಗೆ ಶಿಕ್ಷಣವೇ ಸಂಜೀವಿನಿ: ಹಾರಕೂಡ ಶ್ರೀಗಳು
ಬೀದರ್ :ಮಾ.17:ವಿಶ್ವದ ಉಳಿವು ಅರಿವು ಅಭಿವೃದ್ಧಿಗೆ ಶಿಕ್ಷಣವೇ ಸಂಜೀವಿನಿ ಯಾಗಿದೆ.
ಮೌಲ್ಯವರ್ದಿತ ಶಿಕ್ಷಣದಿಂದ ಸಮಾಜದ ಮೌಲ್ಯವರ್ಧನೆ ಹಾಗುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಚನ್ನ ರೇಣುಕ ಬಸವ ಮಂಟಪದಲ್ಲಿ ಜರುಗಿದ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 22ನೇ ವಾರ್ಷಿಕೋತ್ಸವ ಹಾಗೂ 2023 – 24ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಹಾರಕೂಡ ಶ್ರೀಗಳ 625ನೇ ತುಲಾಭಾರ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಶಿಕ್ಷಣ ನಾಗರಿಕ ಸಮಾಜದ ಶ್ರೀಮಂತಿಕೆಯನ್ನು ಸೂಚಿಸುತ್ತದೆ.
ಹಾಗಾಗಿ ಶಿಕ್ಷಣ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುವ ಮಾಧ್ಯಮವಾಗದೆ, ಪ್ರಾಮಾಣಿಕ ಮತ್ತು ಚಾರಿತ್ರ್ಯ ಶೀಲ ಬದುಕಿಗೆ ಬುನಾದಿ ಆಗಬೇಕು.
ಮಕ್ಕಳ ಮಟ್ಟಕ್ಕೆ ಇಳಿದು ಗುಣಾತ್ಮಕ ಬೋಧನೆ ಮಾಡುವ ಶಿಕ್ಷಕ ಸಮುದಾಯದಿಂದ ದೇಶದ ನಿಜವಾದ ಶೈಕ್ಷಣಿಕ ಸಾಧನೆ ಸಾಧ್ಯವಾಗುತ್ತದೆ.
ನಿನ್ನೆಯಿಂದ ಕಲಿತು ಈ ದಿನ ಸಕಾರಾತ್ಮಕವಾಗಿ ಬದುಕಿ ನಾಳೆಯ ಸದಾಶಿಯದೊಂದಿಗೆ ಜೀವಿಸುವ ಶ್ರೇಷ್ಠ ಜೀವನ ಕಲೆ ಎಲ್ಲರೂ ಕರಗತ ಮಾಡಿಕೊಳ್ಳಬೇಕು.
ಶ್ರೀ ಗುರುಲಿಂಗ ಶಿವಾಚಾರ್ಯ ವಸತಿ ಶಾಲೆಯ ಶಿಕ್ಷಕರ ಪ್ರಾಮಾಣಿಕ ಪ್ರಯತ್ನ ಹಾಗೂ ಮಕ್ಕಳ ಕಲಿಕೆ ನಮಗೆ ಖುಷಿ ತಂದಿದೆ.
ಮುಂದಿನ ದಿನಗಳು ಎಲ್ಲರಿಗೂ ಸುದಿನಗಳಾಗಿ ಪರಿಣಮಿಸಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಬಾರಾಯ ಉಗಾಜಿ ಅವರು ಹಾರಕೂಡ ಶ್ರೀ ಮಠದ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸಗೈದ ಮಕ್ಕಳು ಉನ್ನತ ಹುದ್ದೆ ಪಡೆದುಕೊಳ್ಳುವುದು ಖಚಿತ.
ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು, ಹೊರತು ಯಾವುದೇ ಆತಂಕ ತಾಳಬಾರದೆಂದು ನುಡಿದರು.
ಶಾಲೆಯ ಸಹಶಿಕ್ಷಕಿ ಲಲಿತಾ ಬೊಂಬಲೆ ಮಾತನಾಡಿದರು.
10ನೇ ತರಗತಿ ವಿದ್ಯಾರ್ಥಿಗಳಾದ ಚನ್ನವೀರ ಅಶೋಕ, ವಿವೇಕಾನಂದ ಶಿವರಾಜ, ಸಿದ್ರಾಮ ಸಂಜುಕುಮಾರ, ಜ್ಞಾನೇಶ್ವರಿ ವಿಜಯಕುಮಾರ ಪೂಜಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಬೀದರ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ ಹಿರೇಮಠ, ಹಾರಕೂಡ ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಮಲ್ಲಿನಾಥ ಹಿರೇಮಠ ಹಾರಕೂಡ, ಶಾಲೆಯ ಆಡಳಿತ ಅಧಿಕಾರಿಗಳಾದ ಐ.ಜಿ ಮಠಪತಿ, ಶ್ರೀಮತಿ ಸುನಿತಾ ನಾಲೂರೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ಗುದುಗೆ, ಮುಖಂಡರಾದ ವಿಜಯಕುಮಾರ ಸಂಗೋಳಗೆ, ಸಂತೋಷ ಟೊಣಪೆ, ಜಗದೀಶ ಪಾಟೀಲ ಮುಡಬಿ, ವಿಠಲ ಹೂಗಾರ, ರಾಜಶೇಖರ ನಾಲೂರೆ, ಪಂಡಿತರಾವ ದೇಗಾಂವ, ರಾಜಶೇಖರ ಮದರಿ, ಶಿವಶರಣಪ್ಪ ಚೌದರಿ, ಸಿದ್ದಣ್ಣ ಗುಂಡನೂರ, ಗಿರೀಶ ಪೂಜಾರಿ ಭಾಗವಹಿಸಿದ್ದರು.
ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
ಪ್ರೌಢಶಾಲೆ ಹೆಡ್ ಮಾಸ್ಟರ್ ಪಂಡಿತ ಪೂಜಾರಿ, ಪ್ರಾಥಮಿಕ ಶಾಲೆ ಹೆಡ್ ಮಾಸ್ಟರ್ ಪರಮೇಶ್ವರ ಹೊಳಕುಂದೆ, ಅಲ್ಲಮ ಪ್ರಭು ಹಿರೇಮಠ, ಸುಭಾಷ ರೆಡ್ಡಿ, ಕಮಲಾಕರ ದನ್ನೋರೆ, ಪಂಡಿತ ಬಿರಾದಾರ, ಪ್ರಹ್ಲಾದ ಚೌವ್ಹಾಣ, ಶೋಭಾ ಟೋಣಪೆ, ದಿಲೀಪ್ ಕಲೋಜಿ, ಶಿವಾನಂದ ತಡಕಲ್, ಭೀಮಶ ಜೋಜನ, ಮಂಜುಳಾ ಹರಕೆ, ಸುರೇಖಾ ಜಮಾದಾರ, ಜ್ಯೋತಿ ಕೆರಗೋಟೆ, ಅಂಜನಾ ಜಮಾದಾರ, ಭವಾನಿ ಬೊಂಬಲೆ, ಭಾಗ್ಯಶ್ರೀ ಉಪಾರ, ಪವಿತ್ರ ಘಾಳೆ, ದಾನಮ್ಮ ಜೋಜನ ಮುಂತಾದವರು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಮೋಹನದಾಸ ಅಪ್ಪಾರಾವ ಮತ್ತು ಹರಿಹರ ಭೀಮಾಶಂಕರ ಸಂಸ್ಕøತಿಕ ನೃತ್ಯ ನೋಡುಗರ ಗಮನ ಸೆಳೆಯಿತು.
ನವಲಿಂಗ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.