ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವುದೆ ಶಿಕ್ಷಣದ ಮಹೋನ್ನತ ಗುರಿ
ಬಾದಾಮಿ, ಮಾ.17:ಶಿಕ್ಷಣವು ಮಕ್ಕಳಲ್ಲಿನ ಮೌಲ್ಯಗಳನ್ನು ಬಿತ್ತುವುದೇ ಪ್ರಮುಖವಾದ ಗುರಿ ಹಾಗೂ ಸಂಸ್ಕಾರ ಶಿಸ್ತು ಸಂಯಮತೆಯನ್ನು ಅಳವಡಿಸಿಕೊಂಡು ಏಕಾಗ್ರತೆಯಿಂದ ನಾವು ಗುರುಗಳ ಮಾರ್ಗದರ್ಶನದಲ್ಲಿ ಸಾಗಿದಾಗಲೇ ಯಶಸ್ಸಿನ ದಾರಿ ದೊರಕುತ್ತದೆ ಎಂದು ಗೋವನಕೊಪ್ಪ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುವರ್ಣ ವಿ ಸಾಲಿಮಠ ಹೇಳಿದರು.
ಅವರು ತಾಲೂಕಿನ ಬೆಳವಲಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 10 ನೆಯ ತರಗತಿ ವಿದ್ಯಾರ್ಥಿಗಳಿಗೆ ಹ್ಮಮಿಕೊಂಡಿದ್ದ ಬೀಳ್ಕೊಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಪೆÇೀ?Àಕರು ಮಕ್ಕಳ ಮೇಲೆ ನಿಗ ವಹಿಸಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿ ಸತ್ ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ವರ್ಗದ ಶಿಕ್ಷಕ ಬಿ.ಟಿ.ಹಳ್ಳಿ ಇವರು ಮಾತನಾಡಿ ಮಕ್ಕಳ ಅನಿಯಮಿತ ಗೈರು ಹಾಜರಿ ಯಿಂದ ಮಕ್ಕಳ ಶಿಕ್ಷಣವನ್ನು ಕುಂಠಿತ ವಾಗದಂತೆ ಮಕ್ಕಳು ಓದಲು ಬರೆಯಲು ಅವರಿಗೆ ಸಮಯ ನೀಡುವಲ್ಲಿ ಪಾಲಕರು ಮತ್ತು ಪೆÇೀ?Àಕರು ಜಾಗೃತವಾಗಬೇಕಾಗಿರುವುದು ಇಂದಿನ ವಾಸ್ತವದ ಸ್ಥಿತಿಯಾಗಿದೆ. ಮಕ್ಕಳ ಮೇಲಿನ ಮಮತೆಯಿಂದ ಅವರು ಶಿಕ್ಷಣ ವಂಚಿತರಾಗದಂತೆ ಎಲ್ಲ ಪಾಲಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಲು ಹಾಗೂ ನೋಂದಣಿಯಾದ ಎಲ್ಲಾ ವಿದ್ಯಾರ್ಥಿಗಳು ಮನೆಯಲ್ಲಿ ಸತತ ಅಧ್ಯಯನ ಮಾಡಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡಲು ಸಭೆಯಲ್ಲಿದ್ದ ಪಾಲಕ ಪೆÇೀ?Àಕರಿಗೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ಶ್ರೀಮತಿ ರೇಣುಕಾ ಕಾಮಣ್ಣ ಪೂಜಾರ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಎಸ್.ಎಂ.ಕಾಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಯನ್ನ ಬಯಸುವಂಥವರಾಗಿದ್ದು ಮಕ್ಕಳಲ್ಲಿ ಶಿಕ್ಷಣದ ಆಸಕ್ತಿಯನ್ನು ಹೆಚ್ಚಿಸುವಲ್ಲಿ ವಿವಿಧ ಚಟುವಟಿಕೆಗಳನ್ನ ಹಾಗೂ ಆಟೊಟಗಳನ್ನು ಹಮ್ಮಿಕೊಂಡು ಮಕ್ಕಳನ್ನ ಪೆÇ್ರೀತ್ಸಾಹ ಮಾಡುತ್ತಾ ಬಂದಿದ್ದೇವೆ ಮತ್ತು ಗೈರು ಹಾಜರಾಗುವ ಮಕ್ಕಳನ್ನು ಮನೆ ಮನೆಗೆ ಭೇಟಿಯನ್ನು ಮಾಡಿ ಅವರನ್ನು ಕರೆತರುವಲ್ಲಿ ಸಾಕ?À್ಟು ಪಾಲಕ ಪೆÇೀ?Àಕರ ಸಭೆ ಮಾಡಿದ್ದೇವೆ ಮಕ್ಕಳ ಮುಂದಿನ ಜೀವನದ ಏಳಿಗೆಗಾಗಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ತಾವೆಲ್ಲರೂ ಉತ್ತೀರ್ಣರಾಗುವುಂತೆ ಶುಭ ಹಾರೈಸಿದರು.
ಕಳೆದ ಸಾಲಿನಲ್ಲಿ ಶಾಲೆಗೆ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಬಂದಿರುವ ವಿದ್ಯಾರ್ಥಿನಿಯನ್ನು ನಗದು ಪುರಸ್ಕಾರ ನೀಡಲಾಯಿತು ಹಾಗೂ ಶಾಲೆಗೆ ವಿವಿಧ ಸಾಮಗ್ರಿ ದೇಣಿಗೆ ಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ವಾರ್ಷಿಕವಾಗಿ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಐ.ಎಚ್.ಡೊಣೂರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಹಶಿಕ್ಷಿಯರಾದ ಪೂರ್ಣ ಜೆ.ವಿ, ಎಸ್.ವಿ.ಪಾಟೀಲ, ಜೆ.ಎಂ.ಕಲ್ಲೋಳಿ ಉಪಸ್ಥಿತರಿದ್ದರು. ಸರ್ಕಾರಿ ಪ್ರೌಢಶಾಲೆಯ ಪ್ರಾಥಮಿಕ ಶಾಲೆಯ ಗುರು ಬಳಗ ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ ಯಲ್ಲಪ್ಪ ಭಾವಿ, ವಾಸು ಭಾವಿ, ದ್ಯಾಮಣ್ಣ ಅನ್ವಲ, ಮಹಾಂತೇಶ್ ಹೊಸಮಠ, ಯಲ್ಲಪ್ಪ ತೂಮ್ಮರಮಟ್ಟಿ ಉಪಸ್ಥಿತರಿದ್ದರು. ಆರ್.ವೈ.ದೇವರೆಡ್ಡಿ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.