ಭಗವಂತನ ಕೃಪೆಯೊಂದಿಗೆ ಜನ್ಮಸಾರ್ಥಕ ಮಾಡಿಕೊಳ್ಳಿ
ನವಲಗುಂದ,ಮಾ.17: ಆಡಂಬರದ ಭಕ್ತಿಯಿಂದ ಯಾವುದೇ ಪ್ರಯೋಜನವಿಲ್ಲ. ಸತ್ಯದ ಹಾದಿಯಲ್ಲಿ ಸಾಗಬೇಕು. ಧರ್ಮದ ನಡೆಯಲ್ಲಿಯೇ ಪಯಣಿಸಬೇಕು. ಎಲ್ಲರಲ್ಲೂ ವಿವೇಚನಾ ಶಕ್ತಿ ಇದೆ ಭಗವಂತನ ಕೃಪೆಯೊಂದಿಗೆ ಜನ್ಮಸಾರ್ಥಕ ಮಾಡಿಕೊಳ್ಳಲು ಸತ್ಸಂಗ ಸಹಕಾರಿ ಎಂದು ತಾಲ್ಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ನಿಂಗಪ್ಪ ಬಾರಕೇರ ಹೇಳಿದರು.
ಅವರು ನಗರದ ಶ್ರೀಚಕ್ರ ಧಾರಿಣಿ ಬಳ್ಳಾರಿ ಶ್ರೀ ದುರ್ಗಾದೇವಿ ದೇವಸ್ಥಾನ ಶಿವಶರಣ ಹರಳಯ್ಯ ಸಮಗಾರ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ಮತ್ತು ಸತ್ಸಂಗ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸಾವಿರಾರು ಬಗೆಯ ಮನಸ್ಸುಗಳ ನಡುವೆ ಹೊಂದಿಕೊಂಡು ಜೀವಿಸುವಾಗ ತಪ್ಪುಗಳು ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸಮಚಿತ್ತದಿಂದ ವರ್ತಿಸಬೇಕಿದೆ’ ಎಂದರು.
ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದ ಶಾರದೇಶ್ವರಿ ಆಶ್ರಮದ ಅನನ್ಯಮಯಿ ಮಾತಾಜಿ ಮಾತನಾಡಿ ಮನುಷ್ಯನ ಜೀವನದಲ್ಲಿ ಸಮಚಿತ್ತದಿಂದ ಬದುಕಲು ಏಕಾಗ್ರತೆಯ ಅವಶ್ಯಕತೆಯಿದೆ. ಭಕ್ತಿಯೇ ಇದಕ್ಕೆ ಪೂರಕ ಸಾಧನ’ ಹಾಗಾಗಿ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು’ ಎಂದು ಆಶೀರ್ವಚನ ನೀಡಿದರು.
ದೇವಸ್ಥಾನದ ಮಹಾಪೆÇೀಷಕರು ಹಾಗೂ ಕಾರ್ಯಕ್ರಮದ ರೂವಾರಿಗಳಾದ ಪಿ ಎಂ ಹೊನಕೇರಿ ಮಾತನಾಡಿ ಸತ್ಸಂಗ ಎಂಬುದು ಗದ್ದಲ ಮಾಡುವುದಲ್ಲ. ಬದಲಿಗೆ ಭಗವಂತನನ್ನು ಆರಾಧಿಸುವ ಮೂಲಕ ಸಂಸ್ಕಾರ ಪಡೆದು ಪರಮಾತ್ಮನಲ್ಲಿ ಲೀನವಾಗುವುದು. ಎಲ್ಲರೂ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಧ್ಯಾತ್ಮಿಕತೆ ಬೆಳಸಿಕೊಳ್ಳಬೇಕು ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಎಲ್ಲರೂ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನರಗುಂದ ತಾಲ್ಲೂಕಾ ಅಧ್ಯಕ್ಷ ಪೆÇ್ರ. ಬಿ. ಸಿ. ಹನುಮಂತಗೌಡ್ರ ರವರು “ಆತ್ಮಜ್ಞಾನವೇ ಅಂತಿಮ ಜ್ಞಾನ” ಎಂಬ ವಿಷಯ ಕುರಿತು ಅತಿಥಿ ಉಪನ್ಯಾಸ ನೀಡಿದರು.
ರಾಣೆಬೆನ್ನೂರಿನ ರಟ್ಟಿಹಳ್ಳಿ ಪ್ರೀಯದರ್ಶನಿ ಪದವಿ ಮಹಾವಿದ್ಯಾಲಯ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಮಂಜುನಾಥ ಬಿ. ತಲ್ಲೂರ, ಕುಕನೂರ ತಾಲ್ಲೂಕಿನ ಮಂಗಳೂರ ಪ್ರಥಮ ದರ್ಜೆ ಕಾಲೇಜ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಶರಣಪ್ಪ ಅಡವಿ, ಶಾಮಸುಂದರ ಡಂಬಳ ನಗರದ ಗಣ್ಯರು, ಹರಳಯ್ಯ ಸಮಾಜದ ಗುರುಹಿರಿಯರು, ಹೊನಕೇರಿ ಕುಟುಂಬಸ್ಥರು ಉಪಸ್ಥಿತರಿದ್ದರು