ಹೆಣ್ಣುಮಕ್ಕಳಿಗೆ ಜ್ಞಾನವೆಂಬ ಖಡ್ಗ ನೀಡಬೇಕು
ಚನ್ನಮ್ಮನ ಕಿತ್ತೂರು,ಮಾ.17: ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ, ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲು ತಮ್ಮದೆ ಛಾಪನ್ನು ಮೂಡಿಸಿದ್ದಾರೆಂದು ಮಂಜುಳಾ.ಮ.ದೊಡ್ಡಗೌಡರ ಹೇಳಿದರು.
ಪಟ್ಟಣದ ಕಲ್ಮಠ ಚಂದರಗಿ ಸಭಾಭವನದಲ್ಲಿ ರಾಣಿಚನ್ನಮ್ಮ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತ, ಕದಳಿ ಮಹಿಳಾ ವೇದಿಕೆ ಮತ್ತು ಶರಣ ಸಾಹಿತ್ಯ ಪರಿಷತ್ತ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾನಾಡಿದರು.
ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಶಿಕ್ಷಕಿ ಮೀನಾಕ್ಷಿ ಸೂಡಿ ಉಪನ್ಯಾಸ ನೀಡಿ ಮಾತನಾಡಿದರು. ಸಭೆ ಅಧ್ಯಕ್ಷತೆವಹಿಸಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು.
ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಕಲ್ಮಠದ ಮಡಿವಾಳ ರಾಜಯೊಂಗೀದ್ರ ಸ್ವಾಮಿಜಿ ಹೆಣ್ಣುಮಕ್ಕಳನ್ನು ಪೂಜಿಸುವ ದೇಶ ಅದು ಭಾರತ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಲ್ಲಿ ನಾವು ಹಿಂದುಳಿದಿದ್ದು ಮಕ್ಕಳಿಗೆ ರಾಮಾಯಾಣ, ವiಹಾಭಾರತದಂತಹ ಕಥೆಗಳನ್ನು ಹೇಳಬೇಕು. ಅದರಿಂದ ಅವರಲ್ಲಿ ಸಂಸ್ಕಾರ ಬರುತ್ತದೆ.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಪ್ರೋ. ಎಸ್.ಬಿ. ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಮಹಿಳಾ ಸಂಘಟನೆ ಸೇರಿದಂತೆ ಕಿತ್ತೂರ ಗಣ್ಯರು, ಮಹಿಳೆಯರು, ವಿವಿಧ ಮಹಿಳಾ ಸಂಘಟನೆಗಳು, ಸಾರ್ವಜನಿಕರು, ಉದ್ಯಮಿ ಬಸವರಾಜ ಚಿನಗುಡಿ, ಗಂಗಣ್ಣಾ ಕರಿಕಟ್ಟಿ, ಸೇರಿದಂತೆ ಅನಕರಿದ್ದರು. ರಂಜನಾ ಬುಲಬುಲೆ ನಿರೂಪಿಸಿ ಸ್ವಾಗತಿಸಿದರು. ಸುಧಾ ಅಂಕಲಗಿಮಠ ವಂದಿಸಿದರು.