ಸಾವಿತ್ರಿಬಾಯಿ ಫುಲೆ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
ವಿಜಯಪುರ,ಮಾ.17:ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವಿಜಯಪುರ ನಗರ ಘಟಕದ ವತಿಯಿಂದ ನಗರದ ನೌಕರರ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಚಿಂತನ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಸವರಾಜ ತಳವಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಸೃಷ್ಠಿಯ ಮೂಲ. ಆಕೆಯ ಇರುವಿಕೆ ಇಲ್ಲದೆ ಯಾವುದೂ ಇಲ್ಲ. ಅದಕ್ಕೇ ಸ್ತ್ರೀ ದೇವತೆಯ ಸ್ವರೂಪ ಎನ್ನುವುದು. ಇಂದಿನ ಮಹಿಳೆಯರು ಒಗ್ಗಟ್ಟಾಗಿ ಕಾರ್ಯಗಳನ್ನು ಮಾಡಬೇಕು. ಅಂದಾಗ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುವುದು ಎಂದು ಹೇಳಿದರು.
ಡಾ. ಸವಿತಾ ಝಳಕಿ, ಮಹಿಳಾ ಅಸ್ಮಿತತೆಯ ಶೋಧ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ನಗರ ಘಟಕದ ಅಧ್ಯಕ್ಷೆ ಕೆ. ಸುನಂದಾ ಅವರು, ಮಾತೆ ಸಾವಿತ್ರಿಬಾಯಿ ಫುಲೆಯವರು ಹೆಣ್ಣಿನ ಶಿಕ್ಷಣ , ಸ್ವಾವಲಂಬನೆ ಮತ್ತು ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ನೋವುನ್ನು ಅನುಭವಿಸಿ ಇಂದು ಮಹಿಳೆ ಇμÉ್ಟೂಂದು ಮುಂದೆ ಬರಲು ಕಾರಣರಾದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರೇಮಾ ಹಿರೇಮಠ, ಜಯಶ್ರೀ ಬೆಣ್ಣಿ, ಅಕ್ಕುಬಾಯಿ ನಾಯಕ, ಮಾತನಾಡಿದರು.
ಶಿಕ್ಷಣದೊಂದಿಗೆ ಸಂಸ್ಕಾರ ದೊರೆತಾಗ ಒಳ್ಳೆಯ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಅದರಲ್ಲಿ ಪಾಲಕರೊಟ್ಟಿಗೆ ಶಿಕ್ಷಕರ ಪಾತ್ರವೂ ಹಿರಿದಾಗಿದೆ ಎಂದು ಸಾನ್ನಿಧ್ಯ ವಹಿಸಿದ್ದ ಕೈವಲ್ಯ ಕುಠೀರದ ಪ್ರಕಾಶ ಮಹಾರಾಜರು ಆಶೀರ್ವಚನ ನೀಡಿದರು.
ದಾಕ್ಷಾಯಿಣಿ ಹುಡೇದ ಶೋಭಾ ಮೆಡೆಗಾರ ಸುಜ್ಞಾನಿ ಪಾಟೀಲ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಸುಮಂಗಲಾ ಕರಿಗಾರ, ನೀಲಾ ಇಂಗಳೆ, ಜೆ.P.É ಹೂಗಾರ, ಆರಿಫಾ ಮಿರ್ಜಾ, ಗೀತಾ ಕುಲಕರ್ಣಿ, ವಿದ್ಯಾ ಪಾಟೀಲ, ನಹೀಮಾ, ಆರ್.ಎಮ್. ಹೋಳಿನ, ಗೀತಾ ದೊಡ್ಡಮನಿ, ವಡಗೇರಿ ಉಪಸ್ಥಿತರಿದ್ದರು.
ಡಿ.ಎಲ್. ಪಿಂಜಾರ ಸ್ವಾಗತಿಸಿದರು. ಅನಿತಾ ದೇಗಿನಾಳ ನಿರೂಪಿಸಿದರು ಸುನಿತಾ ಪಾಟೀಲ ವಂದಿಸಿದರು.